(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ 22. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಉಪ್ಪಿನಂಗಡಿ ಸೆಕ್ಟರ್ ಇದರ ಮಹಾಸಭೆಯು ಸೆಕ್ಟರ್ ಅಧ್ಯಕ್ಷ ಹಾರಿಸ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಸುನ್ನೀ ಸೆಂಟರ್ ಉಪ್ಪಿನಂಗಡಿಯಲ್ಲಿ ನಡೆಯಿತು.
ಸಭೆಯನ್ನು ಸೆಕ್ಟರ್ ಸದಸ್ಯರಾದ ಸಿರಾಜುದ್ದೀನ್ ಸಖಾಫಿ ಉದ್ಘಾಟನೆ ಮಾಡಿದರು. ಸೆಕ್ಟರ್ ಕಾರ್ಯದರ್ಶಿ ಸಿರಾಜ್ ಆತೂರು ವರದಿ ವಾಚಿಸಿ ಸೆಕ್ಟರ್ ಕೋಶಾದಿಕಾರಿ ನಾಸಿರ್ ಆತೂರು ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭ ವೀಕ್ಷಕರಾಗಿ ಆಗಮಿಸಿದ ಉಪ್ಪಿನಂಗಡಿ ಡಿವಿಶನ್ ನಾಯಕರಾದ ರಫೀಕ್ ಝೈನಿ, ಮುಸ್ತಫಾ ಉರುವಾಲುಪದವು, ಅಶ್ರಫ್ ಉಜಿರೆಬೆಟ್ಟು, ಜುನೈದ್ ತುರ್ಕಳಿಕೆರವರ ನೇತೃತ್ವದಲ್ಲಿ ನೂತನ ಸಾಲಿನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಹಾರಿಸ್ ಸಖಾಫಿ ಕೆಮ್ಮಾರ ಉಪಾಧ್ಯಕ್ಷರಾಗಿ ನಝೀರ್ ಮುಸ್ಲಿಯಾರ್ ಹಾಗೂ
ರಹ್ಮಾನ್ ಮಠ ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜ್ ಆತೂರು, ಜೊತೆ ಕಾರ್ಯದರ್ಶಿಗಳಾಗಿ ಹಮೀದ್ ಕರ್ವೇಲ್, ಹಾರಿಸ್ ಗಂಡಿಬಾಗಿಲು ಕೋಶಾಧಿಕಾರಿಯಾಗಿ ನಾಸಿರ್ ಬೊಳುಂಬುಡ ಕ್ಯಾಂಪಸ್ ಕಾರ್ಯದರ್ಶಿಯಾಗಿ ಹಾಗೂ ಸದಸ್ಯರುಗಳಾಗಿ ಮುಝಮ್ಮಿಲ್ ಮಠ, ಸಿರಾಜುದ್ದೀನ್ ಸಖಾಫಿ, ಮಹ್ ರೂಫ್ ಆತೂರು, ಮುಸ್ತಫಾ ಮುಸ್ಲಿಯಾರ್, ಅಶ್ರಫ್ ಸಅದಿ ಬಿಳಿಯೂರು, ಸೈಫುಲ್ಲಾ ಗಂಡಿಬಾಗಿಲು, ರಝಾ ಅಂಜದಿ, ರಿಯಾಝ್ ಕರ್ವೇಲ್, ಇಮ್ತಿಯಾಝ್ ಬಿಳಿಯೂರು, ಮುರ್ಶಿದ್ ಕೆಮ್ಮಾರ, ಕಾಸಿಂ ಕೊಪ್ಪಳ, ಅನೀಸ್ ಕೆಮ್ಮಾರ, ನವಾಝ್ ಆತೂರು
ಸದಸ್ಯರುಗಳಾಗಿ ಇವರನ್ನು ಆಯ್ಕೆ ಮಾಡಲಾಯಿತು. ಡಿವಿಶನ್ ನಾಯಕರಿಂದ ನೂತನ ಸಮಿತಿಗೆ ಪುಸ್ತಕ ಹಸ್ತಾಂತರಿಸಲಾಯಿತು. ಕಾರ್ಯಕ್ರಮವನ್ನು ಸಿರಾಜ್ ಆತೂರು ಸ್ವಾಗತಿಸಿ ವಂದಿಸಿದರು.