ಕರ್ನಾಟಕ ಸಿರೋ ಮಲಬಾರ್ ಅಸೋಸಿಯೇಶನ್ ಬೆಳ್ತಂಗಡಿ ಧರ್ಮಪ್ರಾಂತ್ಯ ➤ ಇಂದು ಶ್ರೀ ಸಾಮಾನ್ಯರ ಬೃಹತ್ ಸಮಾವೇಶ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ: ಫೆ. 22. ಕರ್ನಾಟಕ ಸಿರೋ ಮಲಬಾರ್ ಅಸೋಸಿಯೇಶನ್ ಬೆಳ್ತಂಗಡಿ ಧರ್ಮಪ್ರಾಂತ್ಯದ ಅಧೀನದಲ್ಲಿ ಶ್ರೀ ಸಾಮಾನ್ಯರ ಬೃಹತ್ ಸಮಾವೇಶ ಇಂದು ಉಜಿರೆಯ ಅನುಗ್ರಹ ಸಭಾಂಗಣದಲ್ಲಿ ನಡೆಯಲಿದೆ.

KSMCA ಅಧ್ಯಕ್ಷರಾದ ಸೆಬಾಸ್ಟಿಯನ್ ಕೆ.ಕೆ ಅಧ್ಯಕ್ಷತೆಯನ್ನು ವಹಿಸಲಿದ್ದು, ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಪರಮಪೂಜ್ಯ ಲಾರೆನ್ಸ್ ಮುಕ್ಕುಯಿ ಸಮಾವೇಶದ ಉದ್ಗಾಟನೆ ಮಾಡಲಿದ್ದಾರೆ. ಭದ್ರಾವತಿ ಧರ್ಮಪ್ರಾಂತ್ಯದ ಪರಮಪೂಜ್ಯ ಬಿಷಪ್ ಮಾರ್ ಜೋಸೆಫ್ ಅರುಮಚ್ಚಾಡತ್ತ್ ಧ್ವಜಾರೋಹಣ ಮಾಡುವುದರೊಂದಿಗೆ ಆಶೀರ್ವಚನ ನೀಡಲಿದ್ದಾರೆ. ಮಾನ್ಯ ಐವಾನ್ ಡಿಸೋಜ, ತೋಮಸ್ ಕುಮಳಿ, ಭಾರತ ಕ್ಯಾಥೋಲಿಕ್ ಯೂನಿಯನ್ ಅಧ್ಯಕ್ಷ ಶ್ರೀ ಲ್ಯಾನ್ಸೀ ಡಿಕುನ್ಹ ಸೇರಿದಂತೆ ಅನೇಕ ಪ್ರಮುಖರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಸಭಾ ವಿಶ್ವಾಸಿಗಳು ಭಾಗವಹಿಸಲಿದ್ದಾರೆ. ಬೆಳಗ್ಗೆ 9:30 ರಿಂದ ಮಧ್ಯಾಹ್ನ 1:30 ರವರೆಗೆ ಸಮಾವೇಶ ನಡೆಯಲಿದೆ ಎಂದು ಸಮಾವೇಶದ ಸಂಘಟಕರು ತಿಳಿಸಿದ್ದಾರೆ.

Also Read  ಉಪ್ಪಿನಂಗಡಿ: ಮಳೆಗೆ ಕುಸಿದಿದ್ದ ಕಂಪೌಂಡ್ ದುರಸ್ಥಿಗೊಳಿಸಿದ ಎಸ್ಕೆಎಸ್ಸೆಸ್ಸೆಫ್ ಆತೂರು ಕ್ಲಸ್ಟರ್ ವಿಖಾಯ ತಂಡ

error: Content is protected !!
Scroll to Top