ಕಾರ್ಕಳ, ಫೆ.22: ಓಮ್ನಿ ಕಾರೊಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ವ್ಯಕ್ತಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಗುರ್ಗಲ್ ಗುಡ್ಡೆ ಎಂಬಲ್ಲಿ ನಡೆದಿದೆ. ಮೃತರನ್ನು ಕರ್ಕಳ ನಿವಾಸಿ ಸುಧಾಕರ ಶೆಟ್ಟಿ(51) ಎಂದು ಗುರುತಿಸಲಾಗಿದೆ.
ತಾಲೂಕಿನ ನಲ್ಲೂರು ಗ್ರಾಮದ ಗುರ್ಗಲ್ ಗುಡ್ಡೆ ಎಂಬಲ್ಲಿ ಹಾದು ಹೋಗಿರುವ ಕಾರ್ಕಳ-ಬೆಳ್ತಂಗಡಿ ಹೆದ್ದಾರಿ ರಸ್ತೆಯ ಬದಿ ಮಣ್ಣು ರಸ್ತೆಯಲ್ಲಿ ಸುಧಾಕರ ಶೆಟ್ಟಿ ಅವರ ಸಂಬಂಧಿ ಹರಿಪ್ರಸಾದ್ ಶೆಟ್ಟಿ ಎಂಬುವವರೊಂದಿಗೆ ಮಾತನಡುತ್ತಿದ್ದರು.
ಈ ಸಂದರ್ಭ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದ ಓಮ್ನಿ ಕಾರು ಸುಧಾಕರ ಅವರಿಗೆ ಢಿಕ್ಕಿಯಾಗಿದೆ. ಪರಿಣಾಮ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.