ಒಂದೂವರೆ ತಿಂಗಳ ಹಿಂದೆ ಕಬಕದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು: ಫೆ.21, ಕಳೆದ ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದ ಕಬಕದ ಚಾಲಕರೋರ್ವರು ಬೆಳ್ಳಾರೆಯಲ್ಲಿ ಪತ್ತೆಯಾಗಿದ್ದಾರೆ.

ಕಬಕದ ಪರನೀರುಕಟ್ಟೆ ನಿವಾಸಿಯಾದ ಇಸ್ಮಾಯಿಲ್(48) ಎಂಬವರು ಜ.7 ರಂದು ಸಂಜೆ ಮನೆಯಲ್ಲಿದ್ದು, ಆಕಸ್ಮತ್ತಾಗಿ ಮನೆಯಿಂದ ಹೊರಗಡೆ ಹೋದವರು ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದರು. ಅವರು ಮನೆಯಿಂದ ಹೊರ ಹೋಗುವಾಗ ಮನೆಯಲ್ಲಿದ್ದ ಪಿಕಪ್ ಜೀಪ್ ಹಾಗೂ ಬೈಕನ್ನು ಸಹ ಕೊಂಡೊಯ್ದಿದ್ದರು. ಈ ಕುರಿತು ಅವರ ಪತ್ನಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ ಪೊಲೀಸರು ಇಸ್ಮಾಯಿಲ್ ರವರನ್ನು ಫೆ. 21 ರಂದು ಬೆಳ್ಳಾರೆಯಲ್ಲಿ ಪತ್ತೆ ಹಚ್ಚಿದ್ದಾರೆ.

Also Read  ರಾಜ್ಯ ಅಲ್ಪಸಂಖ್ಯಾತರ ಕಾಂಗ್ರೆಸ್ ಘಟಕದ ಸಂಯೋಜಕರಾಗಿ ತಾಜ್ ಮಹಮ್ಮದ್ ಸಂಪಾಜೆ ನೇಮಕ

error: Content is protected !!
Scroll to Top