ಕಿನ್ನಿಮುಲ್ಕಿ: ಖಾಸಗಿ ಬಸ್ ಢಿಕ್ಕಿ ಹೊಡೆದು ಸ್ಕೂಟಿ ಸವಾರೆ ಮೃತ್ಯು

ಉಡುಪಿ, ಫೆ.21: ಖಾಸಗಿ ಬಸ್ ಢಿಕ್ಕಿ ಹೊಡೆದು ಸ್ಕೂಟಿ ಸವಾರೆಯೊಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ಕಿನ್ನಿಮುಲ್ಕಿ ಬಳಿ ನಡೆದಿದೆ. ಮೃತರನ್ನು ಅಲೆವೂರು ಗ್ರಾಮ ಪಂಚಾಯತ್ ಸದಸ್ಯ ಸುಧಾಕರ್ ಪೂಜಾರಿ ಪತ್ನಿ, ಬ್ಯೂಟಿ ಪಾರ್ಲರ್ ಮಾಲಕಿ ಅಂಬಾಲಪಾಡಿ ನಿವಾಸಿ ಮಮತ ಪೂಜಾರಿ(35) ಎಂದು ಗುರುತಿಸಲಾಗಿದೆ.

ಇವರು ಕಿನ್ನಿಮುಲ್ಕಿ ಪೆಟ್ರೊಲ್ ಪಂಪ್‌ನಿಂದ ತನ್ನ ಸ್ಕೂಟಿಗೆ ಇಂಧನ ತುಂಬಿಸಿ ಗೋವಿಂದ ಕಲ್ಯಾಣ ಮಂಟಪ ಕಡೆ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಎಕೆಎಂಎಸ್‌ನ ಚಾಲಕ ಸ್ಕೂಟಿಯನ್ನು ಗಮನಿಸದೆ ಇದ್ದುದರಿಂದ ಸವಾರೆ ಬಸ್ಸಿನ ಎಡ ಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

Also Read  ಕಡಬ: ಶಂಕಿತ ಎಚ್1ಎನ್1 ಜ್ವರಕ್ಕೆ ಆಟೋ ಚಾಲಕ ಬಲಿ ➤ ಎಚ್1ಎನ್1 ಭೀತಿಯಲ್ಲಿ ಕಡಬದ ಜನತೆ

ಅಪಘಾತ ನಂತರ ಬಸ್ ಚಾಲಕ, ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ. ಅಪಘಾತದಿಂದ ಬಸ್ ಸ್ಕೂಟಿಯನ್ನು ಹಲವು ದೂರ ಎಳೆದು ಕೊಂಡು ಹೋಗಿದೆ. ಬಸ್ ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತ ಬಸ್ ಚಲಾಯಿಸುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

error: Content is protected !!
Scroll to Top