(ನ್ಯೂಸ್ ಕಡಬ) newskadaba.com ಕಡಬ. ಫೆ.19, ಇತಿಹಾಸ ಪ್ರಸಿದ್ಧವಾದ ಕುಂತೂರು ಬೇಲ್ಪಾಡಿ ಮಖಾಂ ಶರೀಫಿನಲ್ಲಿ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮವು ಫೆ.20ರಂದು ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಯ್ಯದ್ ಅಬ್ದುಲ್ ರಶೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ರವರು ನೇತೃತ್ವ ನೀಡಲಿದ್ದು, ಸ್ಥಳೀಯ ಮಸೀದಿ ಖತೀಬರಾದ ಕೆ.ವಿ ಮಜೀದ್ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.