ಹಿರಿಯ ನಟಿ ಕಿಶೋರಿ ಬಲ್ಲಾಳ್ ನಿಧನ

ಬೆಂಗಳೂರು, ಫೆ.18: ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಮಂಗಳವಾರ ಬೆಳಗ್ಗೆ ಬೆಂಗಳೂರಿನ ಜಯನಗರ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಸುಮಾರು 70ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಉಸಿರಾಟದ ತೊಂದರೆಯಿಂದಾಗಿ ಬಳಲುತ್ತಿದ್ದ ಅವರನ್ನು ಚಿಕಿತ್ಷೆಗೆಂದು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಶೋರಿ ಬಲ್ಲಾಳ್ ಮೂಲತಃ ದ.ಕ. ಮಂಗಳೂರಿನವರು. ಅವರು 1960ರಲ್ಲಿ ಬೆಳ್ಳಿತೆರೆಗೆ ಬಂದಿದ್ದ ‘ಇವಳೆಂಥ ಹೆಂಡತಿ’ ಸಿನೆಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಸುಮಾರು ಹದಿನೈದು ವರ್ಷಗಳ ಸಿನಿ ಜೀವನದಲ್ಲಿ ಶಾರೂಖ್ ಖಾನ್ ಅಭಿನಯಿಸಿದ ಸ್ವದೇಶ್ ಸಿನಿಮಾ ಸೇರಿದಂತೆ 70 ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ.

Also Read  ಮಂಗಳೂರು: ನಿವೃತ್ತ ನ್ಯಾಯಮೂರ್ತಿ ಸುರೇಶ್ ಹೊಸಬೆಟ್ಟು ನಿಧನ

ಪ್ರಮುಖವಾಗಿ ಅಜ್ಜಿ, ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ಆ ಪಾತ್ರದಿಂದಲ್ಲೇ ಜನಮನ ಗೆದಿದ್ದಾರೆ. ಕನ್ನಡದ ಹಲವಾರು ಪ್ರಸಿದ್ಧ ನಟರೊಂದಿಗೆ ಕಿಶೋರಿ ಬಲ್ಲಾಳ್ ನಟಿಸಿದ್ದಾರೆ.

error: Content is protected !!
Scroll to Top