ಕಾಸರಗೋಡು, ಫೆ.17: ಮೂರು ವಾಹನಗಳು ಢಿಕ್ಕಿಯಾಗಿದ್ದು, ಟಿಪ್ಪರ್ ಚಾಲಕ ವಾಹನದ ಒಳಗೆ ಸಿಲುಕಿದ ಘಟನೆ ಉಪ್ಪಳ ಸರಕಾರಿ ಶಾಲೆ ಬಳಿಯ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿ ಟಿಪ್ಪರ್ ಚಾಲಕನನ್ನು ರಕ್ಷಣೆ ಮಾಡಿದ್ದು, ಗಾಯಗೊಂಡ ಚಾಲಕನನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯಿಂದ ಹೆದ್ದಾರಿಯಲ್ಲಿ ಅರ್ಧ ಗಂಟೆ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕಾಸರಗೋಡಿನಿಂದ ತಲಪಾಡಿಗೆ ತೆರಳುತ್ತಿದ್ದ ಖಾಸಗಿ ಬಸ್ ಉಪ್ಪಳ ಶಾಲಾ ಬಳಿ ಪ್ರಯಾಣಿಕರನ್ನು ಇಳಿಸಲೆಂದು ನಿಂತಿದ್ದ ಸಂದರ್ಭದಲ್ಲಿ ಉಪ್ಪಳ ಭಾಗದಿಂದ ತೆರಳುತ್ತಿದ್ದ ಟಿಪ್ಪರ್ ನಿಲ್ಲಿಸಿದ ಬನ್ನು ಹಿಂದಿಕ್ಕಿ ಸಾಗಿದ್ದು ಎದುರಿನಿಂದ ಬರುತ್ತಿದ್ದ ಕಂಟೈನಗೆ ಢಿಕ್ಕಿ ಹೊಡೆದಿದೆ. ಇದೇ ಸಂದರ್ಭದಲ್ಲಿ ಟಿಪ್ಪನ ಹಿಂಭಾಗ ಬನ ಒಂದು ಬದಿಗೆ ಢಿಕ್ಕಿ ಹೊಡೆದಿದೆ.
ಈ ಸಂದರ್ಭದಲ್ಲಿ ಚಾಲಕ ಟಿಪ್ಪರ್‌ನಲ್ಲಿ ಸಿಲುಕಿದ್ದು, ಆತನನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ರಕ್ಷಿಸಿ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.