ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಕಂಡಕ್ಟರ್ ನಿಂದ ಕಾಮದಾಟ ➤ ವೀಡಿಯೋ ಸಖತ್ ವೈರಲ್

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.17. ಕೆಎಸ್ಸಾರ್ಟಿಸಿ ಬಸ್ ನ ನಿರ್ವಾಹಕನೋರ್ವ ಲೈಂಗಿಕ ಕಿರುಕುಳ ನೀಡುವ ದೃಶ್ಯವೊಂದು ಸಖತ್ ಸುದ್ದಿ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಲಿಸುತ್ತಿದ್ದ ಬಸ್ಸಿನಲ್ಲಿ ನಿರ್ವಾಹಕ ತನ್ನ ಪಕ್ಕದಲ್ಲಿ ಕುಳಿತಿದ್ದ ಯುವತಿಯ ಎದೆಯ ಭಾಗಕ್ಕೆ ಕೈಹಾಕಿ ಲೈಂಗಿಕ ಕಿರುಕುಳ ನೀಡುವ ದೃಶ್ಯವನ್ನು ಯಾರೋ ಸೆರೆಹಿಡಿದಿದ್ದಾರೆ. ಈತ ಪುತ್ತೂರು ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂಡಕ್ಟರ್ ಎನ್ನಲಾಗಿದ್ದು, ಈತನ ಕಿರುಕುಳದಿಂದ ಬೇಸತ್ತ ಯುವತಿಯು ಆತನ ಕೈಯನ್ನು ದೂರ ತಳ್ಳುವುದು ದೃಶ್ಯದಲ್ಲಿ ಸೆರೆಯಾಗಿದೆ. ಈತನು ಈ ಹಿಂದೆಯೂ ಒಂಟಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಇದೀಗ ವೀಡಿಯೋ ದೃಶ್ಯದಲ್ಲಿ ಸೆರೆ ಸಿಕ್ಕಿದ್ದಾನೆ.

error: Content is protected !!

Join the Group

Join WhatsApp Group