ಬೆಂಗಳೂರಿನಲ್ಲಿರುವ ನ್ಯಾಶನಲ್ ಕಾನೂನು ವಿಶ್ವವಿದ್ಯಾಲಯದ ಎನ್ ಎಸ್ ಯು ಐ ಉಸ್ತುವಾರಿಯಾಗಿ ಸಿ.ವಿ ಆದಿಲ್ ಅಲಿ ಆಯ್ಕೆ

(ನ್ಯೂಸ್ ಕಡಬ) newskadaba.com, ಫೆ.16. ದೆಹಲಿಯ ಎನ್ ಎಸ್ ಯು ಐ ಸಂದರ್ಶನದಲ್ಲಿ ದೇಶಾದ್ಯಂತ ಆಯ್ದ 2500 ವಿದ್ಯಾರ್ಥಿ ನಾಯಕರಲ್ಲಿ 200 ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಬೆಂಗಳೂರಿನಲ್ಲಿರುವ ನ್ಯಾಶನಲ್ ಕಾನೂನು ವಿಶ್ವವಿದ್ಯಾಲಯಕ್ಕೆ ಎನ್ ಎಸ್ ಯು ಐ ನ ಉಸ್ತುವಾರಿಯನ್ನಾಗಿ ಸಿ.ವಿ ಆದಿಲ್ ಅಲಿ ಇವರನ್ನು ರಾಷ್ಟೀಯ ಎನ್ ಎಸ್ ಯು ಐ ಅಧ್ಯಕ್ಷ ನೀರಜ್ ಕುಂದನ್ ಆಯ್ಕೆ ಮಾಡಿರುತ್ತಾರೆ.

ಇವರು ಕಲ್ಲಿಕೋಟೆ ಸಿ.ವಿ. ರಾಫಿ ಹಾಗೂ ಅರಂತೋಡಿನ ರಾಜ್ಯ ನಾಯಕರಾದ ಟಿ.ಎಮ್. ಶಹೀದ್ ತೆಕ್ಕಿಲ್ ರವರ ಸಹೋದರಿ ಟಿ.ಎಮ್. ಜಾಹಿರಾಬಿ ತೆಕ್ಕಿಲ್ ಇವರ ಪುತ್ರ ನಾಗಿದ್ದು, ಅರಂತೋಡಿನಲ್ಲಿ ಹುಟ್ಟಿ ಬೆಳೆದ ಇವರು ಕ್ಯಾಲಿಕಟ್ ಲಾ ಕಾಲೇಜಿನ ಕಾನೂನು ಪದವಿ ವಿದ್ಯಾರ್ಥಿಯಾಗಿದ್ದಾರೆ. ಕಾನೂನು ವಿದ್ಯಾರ್ಥಿ ಯಾಗಿರುವಾಗಲೇ ಆನೇಕ ಜನಪರ ಹೋರಾಟ ಮಾಡಿದ್ದು ಗ್ರಾಹಕರ ವ್ಯಾಜ್ಯ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿ ವಿಜಯವಾಗಿ ಕೇರಳ ರಾಜ್ಯಾದ್ಯಂತ ಹೆಸರು ವಾಸಿಯಾಗಿರುತ್ತಾರೆ. ಅಲ್ಲದೇ ಅಲಿಯಾ ಹೈಯರ್ ಸೆಕೆಂಡರಿ ಸ್ಕೂಲ್ ಕಾಸರಗೋಡಿನ ವಿದ್ಯಾರ್ಥಿ ನಾಯಕನಾಗಿ, ನೆಹರು ಯುವ ಕೇಂದ್ರ ಕ್ಯಾಲಿಕಟ್ ಇದರ ಸದಸ್ಯನಾಗಿ, ಕೇರಳ ರಾಜ್ಯ ದ ಯೂತ್ ಕಮಿಷನ್ ಕ್ವಾಡಿನೇಟರಾಗಿ ಕ್ಯಾಲಿಕಟ್ ಜಿಲ್ಲಾ ಕೆ.ಎಸ್.ಯು ನ ಕಾರ್ಯದರ್ಶಿಯಾಗಿ ಮತ್ತು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕರಾಗಿರುತ್ತಾರೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಪರವಾಗಿ ಕೆಲಸವನ್ನು ನಿರ್ವಹಿಸಿರುತ್ತಾರೆ.

Also Read  ಸದ್ದಿಲ್ಲದೆ ಸ್ಥಗಿತಗೊಂಡ ಕಡಬ-ಪಂಜ ರಸ್ತೆ ಅಗಲೀಕರಣ ಕಾಮಗಾರಿ ► ಸುದ್ದಿಯಿಲ್ಲದೆ ಗಂಟುಮೂಟೆ ಕಟ್ಟಿದ ಕಾರ್ಮಿಕರು

 

error: Content is protected !!
Scroll to Top