breaking news ಕಾರ್ಕಳ: ಭೀಕರ ಅಪಘಾತಕ್ಕೆ 9 ಮಂದಿ ಮೃತ್ಯು

  • 20ಕ್ಕೂ ಅಧಿಕ ಮಂದಿಗೆ ಗಾಯ

ಉಡುಪಿ, ಫೆ.15: ಚಲಿಸುತ್ತಿದ್ದ ಪ್ರವಾಸಿ ಬಸ್ಸೊಂದು ಬಂಡೆ ಢಿಕ್ಕಿ ಹೊಡೆದ ಪರಿಣಾಮ 9 ಮಂದಿ ಮೃತಪಟ್ಟು 20ಕ್ಕೂ ಅಧಿಕ ಮಂದಿಗೆ ಗಾಯಗಳಾದ ಘಟನೆ ಕಾರ್ಕಳ ತಾಲೂಕಿನ ಮಾಳ ಚೆಕ್‌ಪೋಸ್ಟ್ ಸಮೀಪದ ಅಬ್ಬಾಸ್‌ಕಟ್ಟೆ ಬಳಿ ನಡೆದಿದೆ.

ಮೈಸೂರಿನಿಂದ ಮಂಗಳೂರಿಗೆ ಪ್ರವಾಸಕ್ಕೆ ಹೊರಟ ಬಸ್ಸು ಮೈಸೂರಿನಿಂದ ಕುದುರೆ ಮುಖ ಮಾರ್ಗವಾಗಿ ಕಾರ್ಕಳ ಕಡೆ ಅಗಮಿಸುತ್ತಿದ್ದ ವೇಳೆ ಮಾಳ ಮುಳ್ಳೂರು ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 35 ಮಂದಿ ಪ್ರಯಾಣಿಕರಿದ್ದಾರೆಂದು ತಿಳಿದುಬಂದಿದೆ.

ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಧಾವಿಸಿದ್ದಾರೆ. ಗಾಯಾಳುಗಳನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ರಸ್ತೆಯ ಮೇಲೆ ಶವಗಳು ಬಿದ್ದಿವೆ.

Also Read  ಮಂಗಳೂರು: ಜಲೀಲ್ ಹತ್ಯೆ ಪ್ರಕರಣ ➤ ಡಿ. 29ರವರೆಗೆ 144 ಸೆಕ್ಷನ್ ಜಾರಿ

ಬಸ್ ಬೆಂಗಳೂರು ನೋಂದಣಿಯದ್ದು ಎಂದು ತಿಳಿದು ಬಂದಿದೆ. ಅಪಘಾತವಾದ ಬಸ್ ಮೈಸೂರಿನಿಂದ ಕುದುರೆಮುಖ ಮಾರ್ಗವಾಗಿ ಕಾರ್ಕಳಕ್ಕೆ ಬರುತ್ತಿತ್ತು. ಮೈಸೂರಿನ ಐಟಿ ಕಂಪೆನಿಯೊಂದರ ರೆಕಾರ್ಡ್ ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿ ಪ್ರವಾಸಕ್ಕೆ ಬಂದಿದ್ದರು ಎಂಬುದು ತಿಳಿದುಬಂದಿದೆ.

error: Content is protected !!
Scroll to Top