ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 1,523ಕ್ಕೆ ಏರಿಕೆ

ವುಹಾನ್, ಫೆ.15: ಚೀನಾದಲ್ಲಿ ಮಹಾ ಮಾರಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 1,523ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಶುಕ್ರವಾರ ಒಂದೇ ದಿನ 143 ಜನರು ಸಾವನ್ನಪ್ಪಿದ್ದಾರೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.

ಕೊರೊನಾ ವೈರಸ್ ನ ಮೂಲ ಹುಬೈ ಪ್ರಾಂತ್ಯದಲ್ಲಿ ಮತ್ತೆ 2,420 ಜನರಿಗೆ ಸೋಂಕು ತಗುಲಿರುವುದು ಧೃಢಪಟ್ಟಿದೆ. ಮಾತ್ರವಲ್ಲದೆ ಶುಕ್ರವಾರ ಈ ಪ್ರಾಂತ್ಯದಲ್ಲಿ  139 ಜನರು ಮೃತಪಟ್ಟಿದ್ದಾರೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಇಂದಿನ ವರದಿಯ ಪ್ರಕಾರ ಒಟ್ಟಾರೆ ಸೋಂಕು ತಗುಲಿದವರ ಪ್ರಮಾಣ 66,000ಕ್ಕೆ ಏರಿಕೆಯಾಗಿದೆ. ಹುಬೈ ಪ್ರಾಂತ್ಯದಲ್ಲಿ 54,406 ಜನರು ಈ ಮಾರಕ ವೈರಾಣುವಿಗೆ ತುತ್ತಾಗಿದ್ದಾರೆ.

Also Read  ಈ 8 ರಾಶಿಯವರಿಗೆ ವಿವಾಹ ಯೋಗ ವ್ಯಾಪಾರ,ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

error: Content is protected !!
Scroll to Top