ಹವಾಮಾನ ವೈಪರೀತ್ಯದಿಂದ ಬೆಂಗಳೂರಿನಲ್ಲಿ ಬಂದಿಳಿದ ದುಬೈ-ಮಂಗಳೂರು ವಿಮಾನ

ಮಂಗಳೂರು, ಫೆ.15: ಹವಾಮಾನ ವೈಪರೀತ್ಯದಿಂದಾಗಿ ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಮುಂಜಾನೆ ಬಂದಿಳಿಯಬೇಕಾಗಿದ್ದ ಸ್ಪೈಸ್ ಜೆಟ್ ವಿಮಾನ ಮಾರ್ಗ ಬದಲಿಸಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿರುವ ಬಗ್ಗೆ ವರದಿಯಾಗಿದೆ.

ದಮ್ಮಾಮ್ ಮತ್ತು ದುಬೈ ನಿಂದ ಬಂದಿದ್ದ ಏರ್ ಇಂಡಿಯಾ ವಿಮಾನ ಮುಂಜಾವು 4:30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ಆದರೆ 8:30 ಕ್ಕೆ ಬಂದಿದ್ದ ಮತ್ತೊಂದು ವಿಮಾನ ನೇರವಾಗಿ ಬೆಂಗಳೂರಿನಲ್ಲಿ ಇಳಿದಿದೆ. ಬೆಂಗಳೂರಿನಿಂದ ಬೆಳಗ್ಗೆ 8ಗಂಟೆಗೆ ಹೊರಟಿದ್ದ ಸ್ಪೈಸ್ ಜೆಟ್, ಇಂಡಿಗೋ ವಿಮಾನಗಳು ಮಂಗಳೂರಿನಲ್ಲಿ ಮಬ್ಬು ಕವಿದ ವಾತಾವರಣವಿದ್ದರಿಂದ ಮರಳಿ ಬೆಂಗಳೂರಿಗೆ ವಾಪಸ್ಸಾಗಿದೆ ಎಂದು ವರದಿಯಾಗಿದೆ. ಹೈದರಬಾದ್ ನಿಂದ ಬಂದಿದ್ದ ಮತ್ತೊಂದು ವಿಮಾನಕ್ಕೂ ಹವಮಾನ ವೈಪರಿತ್ಯ ಹಿನ್ನಲೆಯಲ್ಲಿ ಲ್ಯಾಂಡ್ ಆಗಲು ಅನುಮತಿ ದೊರೆತಿಲ್ಲ.

Also Read  ಸುಳ್ಯ: ಅಕ್ರಮ ಜೂಜಾಟ ➤ ಮಾಜಿ ಜಿ.ಪಂ ಸದಸ್ಯ ಸೇರಿ 10 ಮಂದಿಯ ಬಂಧನ

error: Content is protected !!
Scroll to Top