ಮಂಗಳೂರು, ಫೆ.14: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ತಪ್ಪು ಎಸಗಿದ್ದ ಇಬ್ಬರು ಸ್ಪೈಸ್‌ಜೆಟ್ ಪೈಲಟ್‌ಗಳ ಪರವಾನಿಗೆಯನ್ನು ನಾಲ್ಕೂವರೆ ತಿಂಗಳ ಅವಧಿಗೆ ನಾಗರಿಕ ವಿಮಾನಯಾನ ನಿರ್ದೇಶಾಲಯದ (ಡಿಜಿಸಿಎ) ಪ್ರಧಾನ ನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
2019ರ ಅಕ್ಟೋಬರ್ 31 ರಂದು ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಸ್ಪೈಸ್‌ಜೆಟ್ 737 ವಿಮಾನವು ಲ್ಯಾಂಡಿಂಗ್ ವೇಳೆ ಪೈಲಟ್ ಮಾಡಿದ ತಪ್ಪಿನಿಂದಾಗಿ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಎಡಕ್ಕೆ ಜಾರಿದ್ದ ಪರಿಣಾಮ ವಿಮಾನವು ರನ್‌ವೇ ಅಂಚಿನ ದೀಪಗಳಿಗೆ ಹಾನಿ ಮಾಡಿತ್ತು.
ಈ ಲೋಪದ ಬಗ್ಗೆ ತನಿಖೆ ನಡೆಸಿದ್ದ ನಿರ್ದೇಶನಾಲಯವು ಪೈಲಟ್‌ಗಳ ಲೋಪ ಸಾಬೀತಾದ ಕಾರಣ ಪರವಾನಗಿ ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿತು ಎಂದು ಪ್ರಕಟನೆ ತಿಳಿಸಿದೆ.
ಈ ಘಟನೆ ನಡೆದ ದಿನದಿಂದ ಈ ಅಮಾನತು ಆದೇಶ ಅನ್ವಯವಾಗಲಿದೆ ಎಂದು ಮಹಾನಿರ್ದೇಶನಾಲಯ ತಿಳಿಸಿದೆ.