ನೂಜಿಬೈಲ್; ಗ್ರಾಮಾಭಿವೃದ್ಧಿ ಯೋಜನೆಯಿಂದ ಕಸದ ಬುಟ್ಟಿ ವಿತರಣೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಫೆ. 14. ಶ್ರೀ.ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನಕ್ಕೆ ಕಸ ಸಂಗ್ರಹಿಸುವ ಬುಟ್ಟಿಯನ್ನು ಗುರುವಾರ ವಿತರಿಸಲಾಯಿತು.

 

ನಮ್ಮ ಶ್ರದ್ಧಾ ಕೇಂದ್ರ ಸ್ವಚ್ಚವಾಗಿರಲಿ ಎಂದ ಧ್ಯೇಯದೊಂದಿಗೆ ಯೋಜನೆಯಿಂದ ಕೊಡಮಾಡಲಾದ ಹಸಿಕಸ ಹಾಗೂ ಒಣಕಸ ಪ್ರತ್ಯೇಕವಾಗಿ ಹಾಕುವ ಕಸದ ಬುಟ್ಟಿಯನ್ನು ಯೋಜನೆಯ ಬಿಳಿನೆಲೆ ವಲಯ ಮೇಲ್ವಿಚಾರಕ ಧರ್ಣಪ್ಪ ಗೌಡ ದೈವಸ್ಥಾನದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅರ್ಚಕ ಕೃಷ್ಣ ಹೆಬ್ಬಾರ್, ಆಡಳಿತ ಮಂಡಳಿ ಅಧ್ಯಕ್ಷ ಮೃತ್ಯುಂಜಯ ಬೀಡೆ, ಉತ್ಸವ ಸಮಿತಿ ಅಧ್ಯಕ್ಷ ದುಗ್ಗಣ್ಣ ಗೌಡ, ರೆಂಜಿಲಾಡಿ ಸೇವಾಪ್ರತಿನಿಧಿ ಯಶವಂತ, ಒಕ್ಕೂಟದ ನಿತ್ಯಾನಂದ ಕುತ್ಯಾಡಿ, ಪ್ರಮುಖರಾದ ಯಶೋಧರ ಗೌಡ ಮಾರಪ್ಪೆ, ಕಿರಣ್ ಗಾನದಕೊಟ್ಟಿಗೆ, ಪವನ್, ದಿನೇಶ್ ಬಾಂತಾಜೆ, ಧರ್ಣಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಧರ ಗೌಡ ಕೃತಜ್ಞತೆ ಸಲ್ಲಿಸಿದರು.

Also Read  ಮತ್ಸ್ಯ ವರ್ಣ ಕಲಾ ಶಿಬಿರ

error: Content is protected !!
Scroll to Top