ಕಲ್ಲುಗುಡ್ಡೆ, ಫೆ.14: ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಜಾತ್ರಾ ಪೂರ್ವ ತಯಾರಿ ಬಗ್ಗೆ ಪೂರ್ವಭಾವಿ ಸಭೆ ದೈವಸ್ಥಾನದ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಎಪ್ರಿಲ್ 7ರಿಂದ 10ರ ವರೆಗೆ ನಡೆಯಲಿರುವ ವಾರ್ಷಿಕ ಜಾತ್ರೆ, ದೈವಗಳ ನೇಮ ಇವುಗಳ ಬಗ್ಗೆ ಆಡಳಿತ ಸಮಿತಿ ಅಧ್ಯಕ್ಷ ಮೃತ್ಯುಂಜಯ ಬೀಡೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮಾ.6ರಂದು ದೈವಸ್ಥಾನದಲ್ಲಿ ಶ್ರಮದಾನ ಮಾಡುವುದೆಂದು ತೀರ್ಮಾನಿಸಲಾಯಿತು. ಸ್ವಚ್ಚತೆಗೆ ಎಲ್ಲರೂ ಆದ್ಯತೆ ನೀಡಲು ಎಲ್ಲರ ಸಹಕಾರ ಕೋರಲಾಯಿತು. ಉತ್ಸವ ಸಮಿತಿ ಅಧ್ಯಕ್ಷ ದುಗ್ಗಣ್ಣ ಗೌಡ, ಪರಿಚಾರಕರಾದ ವಿಜಯ ಕುಮಾರ್ ಕೇಪುಂಜ, ಭಾಸ್ಕರ ಗೌಡ ಎಳುವಾಳೆ, ಉಮೇಶ್ ಶೆಟ್ಟಿ ಸಾಯಿರಾಮ್ ಸಲಹೆ ಸೂಚನೆಗಳನ್ನು ನೀಡಿದರು. ಉತ್ಸವ ಸಮಿತಿಯ ಉಮೇಶ್ ಜಾಲು, ಪದ್ಮನಾಭ ಕೇಪುಂಜ, ಆಡಳಿತ ಸಮಿತಿಯ ಸೋಮಶೇಖರ್ ನಡುಗುಡ್ಡೆ, ನೇಮಣ್ಣ ಗೌಡ ಕಲ್ನಾರ್, ಉಮೇಶ್ ಅರ್ತಿತ್ತಡಿ, ಜಯಂತ್ ಬರೆಮೇಲು, ದಯಾನಂದ ಕೆ., ಯಶೋಧ ಸಂಕೇಶ, ಆಡಳಿತ ಸಮಿತಿ ನಿಕಟಪೂರ್ವ ಅಧ್ಯಕ್ಷ ರಾಮಚಂದ್ರ ಗೌಡ ಎಳುವಾಳೆ, ಪ್ರಮುಖರಾದ ಯಶೋಧರ ಮಾರಪ್ಪೆ, ಲಿಂಗಪ್ಪ ಗೌಡ ಬಾಂತಾಜೆ ಸೇರಿದಂತೆ ಪರಿಚಾರಕ ವರ್ಗ, ನಿಕಟಪೂರ್ವ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀಧರ ಗೌಡ ಗೋಳ್ತಿಮಾರ್ ಸ್ವಾಗತಿಸಿ, ವಂದಿಸಿದರು.