|
ಉಡುಪಿ, ಫೆ.14: ಒಂದೂವರೆ ವರ್ಷ ಹಿಂದೆ ತಾಲೂಕಿನ ಕಲ್ಯಾಣಪುರ ಸಂತೆಕಟ್ಟೆ ಸಮೀಪದ ನೇಜಾರಿನಲ್ಲಿ ನಡೆದ ಮೂರು ವರ್ಷದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ ಗುರುವಾರ 20 ವರ್ಷಗಳ ಕಠಿಣ ಸಜೆ ಹಾಗೂ 10,000 ರೂ ದಂಡ ವಿಧಿಸಿದೆ.
ನೇಜಾರು ನಿವಾಸಿ ಪಳನಿ (65) 2018ರ ಅ. 3ರಂದು ಅಂಗನವಾಡಿಗೆ ಹೋಗುತ್ತಿದ್ದ ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿಯಾಗಿದ್ದ ಸೀತಾರಾಮ ಅವರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಜಿಲ್ಲಾ ಪ್ರಧಾನ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಸಿ.ಎಂ. ಜೋಶಿ ಅವರು ಆರೋಪಿ ಮೇಲಿನ ಆರೋಪ ಸಾಭೀತಾಗಿರುವ ಹಿನ್ನಲೆಯಲ್ಲಿ 20 ವರ್ಷಗಳ ಜೈಲು ಶಿಕ್ಷೆ ಹಾಗೂ 10,000 ರೂ ದಂಡ ನೀಡುವಂತೆ ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭೀಯೋಜಕ ರಾಘವೇಂದ್ರ ವೈ.ಟಿ. ವಾದ ಮಂಡನೆ ಮಾಡಿದ್ದರು |
Related Posts:
- ರಾಷ್ಟ್ರೀಯ ಆರೋಗ್ಯ ಮಿಷನ್ 5 ವರ್ಷ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
- ಕಾರ್ಕಳ : ಟೆಂಪೋಗೆ ಸರ್ಕಾರಿ ಬಸ್ ಢಿಕ್ಕಿ - 10ಕ್ಕೂ ಹೆಚ್ಚು ಮಂದಿಗೆ ಗಾಯ
- ಕರ್ನಾಟಕದಲ್ಲೇ ಮೊದಲ ಬಾರಿ ಅರಣ್ಯದಲ್ಲಿ ಪಕ್ಷಿ ಗಣತಿ!
- ಕರ್ನಾಟಕದ ಮೊದಲ ಶಂಕಿತ ಮಂಕಿಪಾಕ್ಸ್ ಪ್ರಕರಣ ಬೆಂಗಳೂರಿನಲ್ಲಿ ವರದಿ: ಆರೋಗ್ಯ ಇಲಾಖೆ ಎಚ್ಚರಿಕೆ
- ಪತ್ನಿಯ ಶವವನ್ನು ಕತ್ತರಿಸಿ ಪ್ರೆಶರ್ ಕುಕ್ಕರ್ನಲ್ಲಿ ಅಡುಗೆ ಮಾಡಿದ ಪತಿ
- ಮುಡಾ ಹಗರಣ ಪ್ರಕರಣ - ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್
- ಮರ್ಧಾಳ ಗುಡ್ ಶೆಫರ್ಡ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಪರಿಸರ ಕಾಳಜಿ ಮಾಹಿತಿ ಕಾರ್ಯಾಗಾರ…
- ಬಿಳಿನೆಲೆ ಪ್ರೌಢಶಾಲೆಗೆ ಧರ್ಮಸ್ಥಳ ಯೋಜನೆಯಿಂದ ಡೆಸ್ಕ್ ಮತ್ತು ಬೆಂಚ್ ವಿತರಣೆ ಗುಣಮಟ್ಟದ…
- ರೈತ ಸಂಘಟನೆಗಳ ಬೃಹತ್ ಪ್ರತಿಭಟನಾರ್ಯಾಲಿ ಕಲಬುರಗಿ ಬಂದ್ಗೆಾ ಮಿಶ್ರ ಪ್ರತಿಕ್ರಿಯೆ; ಜನಜೀವನ ಸಹಜ
- ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ಯತ್ನ: ಶ್ರೀರಾಮುಲು ಗಂಭೀರ ಆರೋಪ
- ಸುಳ್ಯ : ಕಾರು ಬೈಕ್ ನಡುವೆ ಭೀಕರ ಅಪಘಾತ - ಬೈಕ್ ಸವಾರ ಗಂಭೀರ
- ಬಾಹ್ಯಾಕಾಶದಿಂದ ಮಹಾ ಕುಂಭಮೇಳದ ಫೊಟೋ ಬಿಡುಗಡೆ ಮಾಡಿದ ಇಸ್ರೋ
- ಪ್ರಯಾಗರಾಜ್ ಮಹಾಕುಂಭದಲ್ಲಿ ಪುಣ್ಯ ಸ್ನಾನ ನೆರವೇರಿಸಿದ ಸುಧಾ ಮೂರ್ತಿ
- ಚಿನ್ನದ ದರದಲ್ಲಿ ಏರಿಕೆ
- ಹೊನ್ನಾವರ ಗೋಹತ್ಯೆ ಪ್ರಕರಣ ಬಳಿಕ ಎಚ್ಚೆತ್ತ ಸರ್ಕಾರ: ಜಾನುವಾರು ಕಳ್ಳಸಾಗಣೆ ವಿರುದ್ಧ ಕಠಿಣ…
- ಯಲ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ: ಲಾರಿ ಪಲ್ಟಿಯಾಗಿ 10 ಮಂದಿ ದುರ್ಮರಣ, 13 ಜನರಿಗೆ ಗಾಯ