ವಿಟ್ಲ: ದಿನಸಿ ಅಂಗಡಿಗೆ ಬೆಂಕಿ; ಲಕ್ಷಾಂತರ ರೂ. ನಷ್ಟ

ಬಂಟ್ವಾಳ, ಫೆ.13: ದಿನಸಿ ಸಾಮಗ್ರಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವೀರಕಂಭದಲ್ಲಿ ನಡೆದಿದೆ.

ವೀರಕಂಭ ನಿವಾಸಿ ಹಮೀದ್ ಎಂಬವರ ದಿನಸಿ ಸಾಮಾಗ್ರಿ ಅಂಗಡಿಗೆ ರಾತ್ರಿ ಸುಮಾರು 9:30ರ ಸುಮಾರಿಗೆ ಬೆಂಕಿ ತಗುಲಿ ಅಂಗಡಿ ಭಾಗಶಃ ಬೆಂಕಿಗೆ ಆಹುತಿಯಾಯಿತು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ.

ಬಂಟ್ವಾಳ ಅಗ್ನಿಶಾಮಕ ದಳದ ಎರಡು ವಾಹನಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇನ್ನು ಅಂಗಡಿಗೆ ತಾಗಿಕೊಂಡೆ ಇವರ ಮನೆಯಿರುವುದರಿಂದ ಸ್ವಲ್ಪಹೊತ್ತು ಅಂತಕದ ವಾತಾವರಣ ನಿರ್ಮಾಣವಾಯಿತು.

Also Read  ಮಂಗಳೂರು: ಮತ ಎಣಿಕಾ ಕೇಂದ್ರಕ್ಕೆ ಮೊಬೈಲ್, ಇ-ಗ್ಯಾಜೆಟ್‌ಗಳು ನಿಷೇಧ

ಸಕಾಲದಲ್ಲಿ ಊರಿ ಜನರ ಸಹಕಾರ ಹಾಗೂ ಅಗ್ನಿಶಾಮಕ ದಳವರ ಕಾರ್ಯವೈಖರಿ ಅನಾಹುತ ತಡೆಯಲು ಸಹಕಾರಿಯಾಗಿದೆ. ಆದರೆ ಘಟನೆಯಿಂದ ಯಾವುದೇ ಸಮಸ್ಯೆಗಳು ಅಗದಂತೆ ವಿಟ್ಲ ಠಾಣಾ ಎಸ್ಸೈ ವಿನೋದ್ ಹಾಗೂ ಅವರ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

 

 

error: Content is protected !!
Scroll to Top