ತಿಂಗಳು ಕಳೆದರೂ ನೇಮಕವಾಗಿಲ್ಲ ಬೆಳ್ಳಾರೆ ಠಾಣೆಗೆ ನೂತನ ಎಸ್ಐ

(ನ್ಯೂಸ್ ಕಡಬ) newskadaba.com, ಬೆಳ್ಳಾರೆ. ಫೆ.12. ಸುಳ್ಯ ತಾಲೂಕಿನ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈರಯ್ಯ ಡಿ ಎನ್ ರವರು ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಗೊಂಡು 2 ತಿಂಗಳುಗಳು ಕಳೆದರೂ, ತೆರವಾದ ಬೆಳ್ಳಾರೆ ಠಾಣೆಯ ಠಾಣಾಧಿಕಾರಿ ಹುದ್ದೆಗೆ ನೂತನ ಎಸ್ ಐ ಇನ್ನೂ ಕೂಡ ನೇಮಕವಾಗಿಲ್ಲ.

ವರ್ಗಾವಣೆಗೊಂಡ ಬಳಿಕ ಕೆಲ ದಿನಗಳ ಕಾಲ ಎಎಸ್ ಐ ಮಧುರವರು ಠಾಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಆ ಬಳಿಕ ಪ್ರೊಬೆಷನರಿ ಎಸ್ ಐ ಆಗಿರುವ ಆಂಜನೇಯ ರೆಡ್ಡಿರವರು ಠಾಣೆಯ ಪ್ರಭಾರ ಠಾಣಾಧಿಕಾರಿಯಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಆದಷ್ಟು ಬೇಗನೆ ನೂತನ ಠಾಣಾಧಿಕಾರಿ ಬೆಳ್ಳಾರೆಗೆ ನೇಮಕವಾಗಲಿ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ .

Also Read  ಕಟ್ಟಡ ನಿರ್ಮಾಣಕ್ಕೆಂದು ತೋಡಿದ ಪಾಯದ ಗುಂಡಿಯಲ್ಲಿ ನೀರು ಸಂಗ್ರಹ ► ನೀರಿನ ಹೊಂಡಕ್ಕೆ ಬಿದ್ದು ಮಗು ಮೃತ್ಯು

ಮೇಲಾಧಿಕಾರಿಗಳು ಇದರ ಕುರಿತು ಗಮನಹರಿಸಿ ತೆರವಾದ ಬೆಳ್ಳಾರೆ ಠಾಣೆಯ ಠಾಣಾಧಿಕಾರಿ ಸ್ಥಾನಕ್ಕೆ ಆದಷ್ಟು ಬೇಗನೆ ನೂತನ ಠಾಣಾಧಿಕಾರಿಯನ್ನು ತಕ್ಷಣವೇ ನೇಮಕಗೊಳಿಸಬೇಕಿದೆ.

error: Content is protected !!
Scroll to Top