ನಿಧನ ನ್ಯೂಸ್ ➤ ನೆಲ್ಯಾಡಿ: ಕೊಣಾಲು ಪುದುಕಾಟಿಲ್ ನಿವಾಸಿ ಜಾರ್ಜ್

(ನ್ಯೂಸ್ ಕಡಬ) newskadaba.com ನೆಲ್ಯಾಡಿ ಫೆ.08. ಕೊಣಾಲು ಪುದುಕಾಟಿಲ್ ನಿವಾಸಿ, ಹಿರಿಯರಾದ ಜಾರ್ಜ್ (97) ರವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ಕೊಣಾಲಿನ ಸ್ವಗೃಹದಲ್ಲಿ ನಿಧನರಾದರು.

ಆರಂಭಿಕ ಕಾಲದಲ್ಲಿ ನೆಲ್ಯಾಡಿಯ ಆರ್ಲದಲ್ಲಿ ವ್ಯಾಪಾರಸ್ಥರಾಗಿದ್ದ ಇವರು ಕೊಣಾಲು ಸಂತ ತೋಮಸ್ ಜಾಕೋಬೈಟ್ ಚರ್ಚಿನ ನಿರ್ಮಾಣ ರೂವಾರಿಗಳಲ್ಲಿ ಓರ್ವರಾಗಿದ್ದರು. ಹಲವಾರು ಸಮಾಜಮುಖಿ ಸೇವೆಗಳು, ದಾನ ಧರ್ಮಗಳ ಮೂಲಕ ನೆಲ್ಯಾಡಿ ಪರಿಸರದಲ್ಲಿ ಚಿರಪರಿಚಿತರು. ಮೃತರ ಮನೆಗೆ ವಿವಿಧ ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರು ಆಗಮಿಸಿ ಅಂತಿಮ ದರ್ಶನ ಮಾಡುತ್ತಿದ್ದು, ಮೃತರ ಅಂತಿಮ ಸಂಸ್ಕಾರ ಕಾರ್ಯಗಳು ಶನಿವಾರ ಮಧ್ಯಾಹ್ನದ ನಂತರ ವಿವಿಧ ಧರ್ಮ ಗುರುಗಳುಗಳ ಸಾನಿಧ್ಯದಲ್ಲಿ ಕೊಣಾಲು ಸಂತ ತೋಮಸ್ ಜಾಕೋಬೈಟ್ ಚರ್ಚಿನಲ್ಲಿ ನಡೆಯಲಿದೆ. ಮೃತರು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Also Read  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ➤`ಪೆರ್ನಾಲ್ ಸಂದೋಲ'ಮತ್ತು`ಕಿನಾದಿ' ಬ್ಯಾರಿ ಘಝಲ್ ಸಿಡಿ ಬಿಡುಗಡೆ ಕಾರ್ಯಕ್ರಮ

error: Content is protected !!
Scroll to Top