ರೆ| ಫಾ| ಅಬ್ರಹಾಂ ಪಿ.ಕೆ. ಯವರಿಗೆ ಕೋರ್ ಎಪಿಸ್ಕೋಪಾ ಪದವಿ ಪ್ರದಾನ ➤ 34 ವರ್ಷದ ಧಾರ್ಮಿಕ ಸೇವೆಗೆ ಅರಸಿ ಬಂತು ಪದವಿ

(ನ್ಯೂಸ್ ಕಡಬ) newskadaba.com ಕಡಬ, ಫೆ.07. ಈ ವಾಜರಿಸ್ಟಿಕ್ ಅಸೋಸಿಯೇಷನ್ ಆಫ್ ದಿ ಈಸ್ಟ್ (E.A.E. Arch Diocese) ಈ ಧರ್ಮಪ್ರಾಂತ್ಯದ ಧರ್ಮಗುರು ವಂದನೀಯ ಫಾ| ಅಬ್ರಹಾಂ ಪಿ.ಕೆ. ಯವರ 34 ವರ್ಷಗಳ ಸೇವೆಯನ್ನು ಪರಿಗಣಿಸಿ ಜಾಕೋಬೈಟ್ ಸಿರಿಯನ್ ವಿಭಾಗದ (ದಮಸ್ ಕೋಸ್ ನ ಸಿರಿಯಾ) ಪರಮ ಶ್ರೇಷ್ಠ ಪರಮಾಧ್ಯಕ್ಷರಾದ ಇಗ್ ನಾತ್ತಿಯೋಸ್ ಅಫ್ರೇಂ II ಪಾತ್ರಿಮಾರಕೀಸ್ ಇವರ ಅನುಮತಿಯ ಮೇರೆಗೆ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಮಾರ್ ಕ್ರಿಸೋಸ್ಟೋಮಸ್ ಮರ್ಕೋಸ್ ಬಿಷಪ್ ರಿಂದ ಕೋರ್ ಎಪಿಸ್ಕೋಪಾ ಪದವಿಯನ್ನು ನೀಡಿ ಗೌರವಿಸಲಾಯಿತು.

ರೆಂಜಿಲಾಡಿ ಸೈಂಟ್ ಮೇರೀಸ್ ಸಿರಿಯನ್ ಚರ್ಚ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಮಾರ್ ಅಂತೋನಿಯೋಸ್ ಯಾಕೋಬ್, ಪರಮಪೂಜ್ಯ ಮಾರ್ ಐರೇನಿಯೋಸ್ ಪೌಲೋಸ್, ಪರಮಪೂಜ್ಯ ಮಾರ್ ಮಕಾರಿಯೋಸ್ ಗೀವರ್ಗೀಸ್ ಬಿಷಪ್ ಗಳು ಹಾಗೂ ಅನೇಕ ಧರ್ಮಗುರುಗಳು, ಧರ್ಮ ಭಗಿನಿಯರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಿದ್ದರು.

Also Read  ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ರುಂಡ ಕತ್ತರಿಸಿದ ದುಷ್ಕರ್ಮಿಗಳು

error: Content is protected !!
Scroll to Top