ಎನ್ ಆರ್ ಸಿ‌ ವಿರುದ್ಧ ಇಂದು ಪರಂಗಿಪೇಟೆಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ

(ನ್ಯೂಸ್ ಕಡಬ)‌newskadaba.com, ಮಂಗಳೂರು. ಫೆ. 7. ಸಂವಿಧಾನ ಸಂರಕ್ಷಣಾ ಸಮಿತಿ ಫರಂಗಿಪೇಟೆ, ಮಂಗಳೂರು ಇದರ ಆಶ್ರಯದಲ್ಲಿ ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಹಾಗೂ ಧರ್ಮಾಧಾರಿತ ತಾರತಮ್ಯದ ಮಾರಕ ಕರಾಳ ಕಾಯ್ದೆ ಎನ್ ಆರ್ ಸಿ, ಸಿಎಎ, ಎನ್ ಪಿ ಆರ್ ಇದರ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶವು ಇಂದು ಮಧ್ಯಾಹ್ನ 2:30 ಕ್ಕೆ ಫರಂಗಿಪೇಟೆ ಮೈದಾನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಲವಾರು ಪ್ರಮುಖ ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು, ಪ್ರಮುಖ ಸಾಹಿತಿಗಳು ಖ್ಯಾತ ವಾಗ್ಮಿಗಳು ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಗಳ ಮುಖಂಡರು, ಜಾತ್ಯಾತೀತ ಸಂಘಟನೆಗಳ ಮುಖಂಡರು, ಹಲವಾರು ಪ್ರಮುಖ ಗಣ್ಯರು, ವಿದ್ಯಾರ್ಥಿಗಳು, ಸಾಮಾಜಿಕ ಧಾರ್ಮಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Also Read  ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ವಿವಿಧ ವೃತ್ತಿಪರ ತರಬೇತಿ

error: Content is protected !!
Scroll to Top