ಕೊರೊನಾ ಪರಿಣಾಮದಿಂದ ಭಾರತಕ್ಕೆ ಬರಲಾಗದೆ ಕಂಗಾಲಾದ ಚೀನಾ ದಂಪತಿ

(ನ್ಯೂಸ್ ಕಡಬ) newskadaba.com, ಮಿಡ್ನಾಪುರ್, ಫೆ.6. ಕೊರೋನಾ ವೈರಸ್ ಪರಿಣಾಮದಿಂದ ಮಗಳ ಮದುವೆಗೆ ಚೀನಾದಿಂದ ಭಾರತಕ್ಕೆ ಬರಲಾಗದೆ ಪೋಷಕರು ಹತಾಶರಾದ ಘಟನೆ ನಡೆದಿದೆ.

7 ವರ್ಷಗಳ ಹಿಂದೆ ಭಾರತದ ಯುವಕನಿಗೂ , ಚೀನಾದ ಯುವತಿಗೂ ಪ್ರೇಮಾಂಕುರವಾಗಿ ಫೆಬ್ರವರಿ 5 ರಂದು ವಿವಾಹವಾಗಲು ನಿಶ್ಚಯಿಸಿದ್ದರು.ಇದಕ್ಕಾಗಿ ಬಂಗಾಳದ, ಪೂರ್ವ ಮಿಡ್ನಾಪೂರ್ ನ ಯುವಕನ ಮನೆಯಲ್ಲಿ ಭರ್ಜರಿ ಸಿದ್ದತೆಯೂ ನಡೆದಿತ್ತು. ಆದರೆ ಚೀನಾದಲ್ಲಿದ್ದ ಯುವತಿ ಪೋಷಕರರಿಗೆ ಕೊರೋನಾ ವೈರಸ್ ಕಾರಣದಿಂದ ಮದುವೆ ಸಮಾರಂಭಕ್ಕೆ ಭಾರತಕ್ಕೆ ಬರಲಾಗದೇ ಹತಾಶರಾಗಿದ್ದಾರೆ. ಕೊರೊನಾ ವೈರಸ್ ಕಾರಣದಿಂದ ಭಾರತ ಮತ್ತು ಚೀನಾದ ನಡುವೆ ವಿಮಾನ ಸೇವೆ ರದ್ದುಪಡಿಸಲಾಗಿದ್ದು, ಇದರಿಂದ ಮೊದಲೇ ನಿಗದಿಯಾಗಿದ್ದರಿಂದ ನನ್ನ ಮದುವೆ ಸಮಾರಂಭಕ್ಕೆ ಅವರಿಗೆ ಬರಲಾಗಲಿಲ್ಲ. ಆದರೂ ಅವರು ದುಃಖಿತರಾಗಿದ್ದಾರೆ, ಚೀನಾಕ್ಕೆ ದಂಪತಿ ಸಹಿತ ಹೋಗಬೇಕೆಂಬ ಆಸೆಯಿದ್ದು ಆದರೆ ಯಾವಾಗ ಎಂದು ತಿಳಿಯುತ್ತಿಲ್ಲ ಎಂದು ಮದುಮಗಳು ಜಿಯಾಖಿ ಮಾಧ್ಯಮಕ್ಕೆ ತಿಳಿಸಿದ್ದಾಳೆ.

Also Read  ಮನಿಲಾ ಪ್ರಯಾಣಿಕ ಹಡಗಿನಲ್ಲಿ ಬೆಂಕಿ ➤ 31 ಮಂದಿ ಸಜೀವದಹನ ಹಲವರು ನಾಪತ್ತೆ..!

error: Content is protected !!
Scroll to Top