(ನ್ಯೂಸ್ ಕಡಬ) newskadaba.com, ಸವಣೂರು. ಫೆ.6. ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ಬೈತಡ್ಕ, ಕಾಣಿಯೂರು ಇದರ ಆಶ್ರಯದಲ್ಲಿ ಅಸ್ವಲಾತುಲ್ ಕಫೀಲು ಬಿಶ್ಯಫಾಅಃ ಇದರ 31 ನೇ ವಾರ್ಷಿಕ ಹಾಗೂ ನಾಲ್ಕು ದಿನಗಳ ಧಾರ್ಮಿಕ ಮತ ಪ್ರಭಾಷಣದ ಸಮಾರೋಪ ನಡೆಯಿತು.
ಮಗ್ರಿಬ್ ನಮಾಜಿನ ಬಳಿಕ ಸಯ್ಯದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಳ್ ರವರು ವಾರ್ಷಿಕ ಸ್ವಲಾತ್ ಮಜ್ಲಿಸ್‌ಗೆ ನೇತೃತ್ವ ನೀಡಿ ದುವಾ ನೆರವೇರಿಸಿದರು. ಪಾರತ್ರಿಕ ನರಕಾಗ್ನಿಯಿಂದ ಮುಕ್ತಿಹೊಂದಲು ಮತ್ತು ಐಹಿಕ ಜೀವನದಲ್ಲಿ ಯಶಸ್ಸು ಸಂಪಾದಿಸಬೇಕಾದರೆ ಪ್ರವಾದಿ ಮುಹಮ್ಮದ್(ಸ.ಅ)ರವರ ಸಂದೇಶಗಳನ್ನು ಪಾಲಿಸಬೇಕು, ಪ್ರವಾದಿಯವರ ಮೇಲೆ ನಿರಂತರ ಸ್ವಲಾತ್ ಹೇಳುತ್ತಿರಬೇಕು, ಸ್ವಲಾತ್, ದಿಕ್ರ್ ಮಜ್ಲಿಸ್‌ಗಳಲ್ಲಿ ಪಾಲ್ಗೊಳ್ಳಬೇಕು, ಹೃದಯದಲ್ಲಿ ಪರಿವರ್ತನೆಯಾಗಬೇಕು ಎಂದು ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಳ್ ಹೇಳಿದರು.
ಧಾರ್ಮಿಕ ಮತಪ್ರಭಾಷಣ ಸಮಾರೋಪದಲ್ಲಿ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಮುಖ್ಯ ಪ್ರಭಾಷಣಗೈದರು. ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ಬೈತಡ್ಕ ಇದರ ಅಧ್ಯಕ್ಷ ಎ.ಟಿ.ಸಿ ಅಬ್ದುಲ್ ಕರೀಂ ಹಾಜಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಉಪಾಧ್ಯಕ್ಷ ಪಿ.ಬಿ ಅಬ್ದುಲ್ ರಹಿಮಾನ್ ಹಾಜಿ, ಬೈತಡ್ಕ ಮಸೀದಿಯ ಮಾಜಿ ಅಧ್ಯಕ್ಷ ಬಿ.ಪಿ ಅಬ್ದುಲ್ ಹಮೀದ್ ಹಾಜಿ, ಬೈತಡ್ಕ ಮಸೀದಿಯ ಉಪಾಧ್ಯಕ್ಷರುಗಳಾದ ಬಿ.ಎಸ್ ಇಸ್ಮಾಯಿಲ್ ಹಾಜಿ ಬೈತಡ್ಕ, ಅಬೂಬಕ್ಕರ್ ಹಾಜಿ, ಕೋಶಾಕಾರಿ ಸಾಬು ಹಾಜಿ ಕೆಲೆಂಬಿರಿ, ಬೈತಡ್ಕ ಸದರ್ ಮುಅಲ್ಲಿಂ ಅಲೀ ಸಖಾಫಿ, ಮುಅಲ್ಲಿಂ ತಾಜುದ್ದೀನ್ ಸಖಾಫಿ, ಅಹ್ಮದ್ ಸಿನಾನ್ ಸಅದಿ, ಮುಅಝಿನ್ ಹಕೀಂ ಜೌಹರಿ ಉಪಸ್ಥಿತರಿದ್ದರು. ಬೈತಡ್ಕ ಮುದರ್ರಿಸ್ ಸ್ವಾದಿಕ್ ಸಖಾಫಿ ಸ್ವಾಗತಿಸಿದರು. ಬೈತಡ್ಕ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ರೆಂಜಲಾಡಿ ವಂದಿಸಿದರು.