ಬಿದ್ದು ಸಿಕ್ಕಿದ್ದ ಪರ್ಸ್ ಹಿಂತಿರುಗಿಸಿದ ಸವಣೂರು ವಿದ್ಯಾರಶ್ಮಿ ಕಾಲೇಜಿನ ವಿದ್ಯಾರ್ಥಿನಿಯರು ➤ ಪ್ರಾಮಾಣಿಕತೆ ಮೆರೆದ ಯಶ್ವಿನಿ, ಸ್ಪೂರ್ತಿಗೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಫೆ.05. ಸವಣೂರು ವಿದ್ಯಾರಶ್ಮಿ ಪದವಿ ಕಾಲೇಜಿನ ಆವರಣದೊಳಗೆ ಬಿದ್ದು ಸಿಕ್ಕಿದ ಪರ್ಸನ್ನು ವಿದ್ಯಾರ್ಥಿನಿಯರಿಬ್ಬರು ಕಾಲೇಜಿನ ಮುಖ್ಯಸ್ಥರ ಮೂಲಕ ವಾರಿಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.


ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಯಶ್ವಿನಿ ಹಾಗೂ ಪ್ರಥಮ ವರ್ಷದ ಬಿ.ಎ. ವಿದ್ಯಾರ್ಥಿನಿ ಸ್ಪೂರ್ತಿ ಎಂಬವರಿಗೆ ಹಣ ಇರುವ ಪರ್ಸ್ ಬಿದ್ದು ಸಿಕ್ಕಿದ್ದು, ಅವರು ಅದನ್ನು ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ ಎಸ್. ರೈ ಅವರಿಗೆ ನೀಡಿದ್ದರು. ಬಳಿಕ ಉಪನ್ಯಾಸಕ, ಎನ್ನೆಸ್ಸೆಸ್ ಸಂಯೋಜಕ ವೆಂಕಟ್ರಮಣ ಅವರು ಪರ್ಸ್ ಒಳಗಡೆ ಕಡಬ ಆಕಾಶ್ ಸ್ಟುಡಿಯೋದ ವಿಸಿಟಿಂಗ್ ಕಾರ್ಡ್‌ನಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಪರ್ಸ್ ನ ವಾರಿಸುದಾರ ಕಡಬದ ಬಜಾಜ್ ಶೋರೂಮ್ ಮಾಲಕ ದೀಕ್ಷಿತ್ ಎಂಬವರದ್ದು ಎನ್ನುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ದೀಕ್ಷಿತ್ ಅವರನ್ನು ಸಂಪರ್ಕಿಸಿ ಪರ್ಸನ್ನು ಹಸ್ತಾಂತರಿಸಿದ್ದಾರೆ. ಪರ್ಸನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿನಿಯರಿಗೆ ದೀಕ್ಷಿತ್ ಬಹುಮಾನ ನೀಡಿ ಕೃತಜ್ಞತೆ ಸಲ್ಲಿಸಿದರು.

Also Read  ಪಿಲಿಕುಳ: ಎಂಜಾಯ್ ಮಾಡುತ್ತಿದ್ದ ಭಿನ್ನ ಕೋಮಿನ ಜೋಡಿಗಳು ► ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ನಾಲ್ವರಿಗೆ ಥಳಿತ

error: Content is protected !!
Scroll to Top