ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಾರಂಭ ➤ ವಿವಿಧ ಸವಲತ್ತುಗಳ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಆಲಂಕಾರು, ಫೆ.02. ಶಿಕ್ಷಕರ ಕೊರತೆಯಿಂದಾಗಿ ಸರಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಗುಣ ಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಸುಳ್ಯ ಶಾಸಕ ಎಸ್ ಅಂಗಾರ ನುಡಿದರು. ಅವರು ಶನಿವಾರ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವದ ಸಮಾರಂಭದ ಶಾಶ್ವತ ನೆನಪಿನ ಕೊಡುಗೆಗಳ ಉದ್ಟಾಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಶಿಕ್ಷಣ ರೀತಿಯಲ್ಲಿ ಇಂದಿಗೂ ಸ್ಪಷ್ಟ ನೀತಿ ಜಾರಿಯಾಗಿಲ್ಲ. ಅನಾದಿ ಕಾಲದಲ್ಲಿ ಶಿಕ್ಷಣವು ನಂಬಿಕೆಯ ಆಧಾರದಲ್ಲಿ ನಡೆಯುತ್ತಿತ್ತು. ಆದರೆ ಇಂದಿನ ಶಿಕ್ಷಣ ಪದ್ದತಿಯಲ್ಲಿ ಭಾವನೆಗಳಾಗಲಿ, ನಂಬಿಕೆಗಳಾಗಲಿ ಇಲ್ಲವಾಗಿದೆ. ಜೊತೆಗೆ ಕೇಂದ್ರ ಸಿಲೇಬಸ್ ಮತ್ತು ರಾಜ್ಯ ಸಿಲೇಬಸ್ ಎಂಬ ಎರಡು ಪಠ್ಯ ಕ್ರಮಗಳನ್ನು ಜಾರಿ ಮಾಡಿಕೊಳ್ಳುವುದರ ಮೂಲಕ ಸಂದಿಗ್ದತೆಯನ್ನು ಉಂಟು ಮಾಡಲಾಗಿದೆ. ಇದಕ್ಕಾಗಿ ಮೊದಲು ಶಿಕ್ಷಣ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ಅತ್ಯಗತ್ಯ ಎಂದರು. ಬಡವರು ಆಂಗ್ಲ ಮಾಧ್ಯಮ ಶಿಕ್ಷಣದಿಂದ ವಂಚಿತರಾಗದಿರಲಿ ಎಂಬ ಉದ್ದೇಶದಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇದೀಗ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದೆ. ಸರಕಾರ ಈ ವಿಚಾರದ ಬಗ್ಗೆ ಮೊದಲೇ ಚಿಂತಿಸುತ್ತಿದ್ದರೆ ಇಂದು ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳು ತಲೆ ಎತ್ತುತ್ತಿರಲಿಲ್ಲ ಎಂದರು. ಈ ಶಾಲೆಗೆ ಈಗಾಗಲೇ ಅನುದಾನವನ್ನು ನೀಡಿದ್ದೇನೆ. ಇದೀಗ ಬಾಕಿಯಿರುವ ಕಾಮಗಾರಿಗಳಿಗೆ ಅನುದಾನವನ್ನು ನೀಡುತ್ತೇನೆ ಎಂದು ಭರವಸೆಯಿತ್ತರು.

Also Read  ಪಾಲುದಾರಿಕೆ ವ್ಯವಹಾರದಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ

ನೂತನ ರಂಗ ಮಂದಿರವನ್ನು ಉದ್ಟಾಟಿಸಿ ಸಭಾಧ್ಯಕ್ಷತೆ ವಹಿಸಿದ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ ಕನ್ನಡ ಮಾಧ್ಯಮದ ಮೇಲೆ ಇಂದು ಜನತೆಗೆ ಗೌರವ ಕಡಿಮೆಯಾಗಿದೆ. ಕನ್ನಡದ ಮೇಲಿನ ಕೀಳರಿಮೆ ಸಲ್ಲದು. ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ನಿರ್ಮಿಸಿಕೊಡುವುದು ನಮ್ಮ ಕರ್ತವ್ಯವಾಗಬೇಕು. ಸಂಸ್ಕಾರದ ಜೊತೆಗೆ ಆಚಾರ ವಿಚಾರಗಳನ್ನು ಕಲಿತು ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಶಿಕ್ಷಣ ಮಟ್ಟ ಕುಸಿದಿದೆ ಶಿಕ್ಷಕರ ಕೊರತೆ ಇಲ್ಲಿ ಬಹಳಷ್ಟಿದೆ ಎಂದರು. ನಿವೃತ್ತ ಶಿಕ್ಷಕರಾದ ಟಿ.ಯಸ್. ಆಚಾರ್, ವಿನ್ಸೆಂಟ್ ಫೆರ್ನಾಂಡೀಸ್, ಶಾಲಾ ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳು ಶಿಕ್ಷಕರ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು.
ಇದೇ ವೇಳೆ ದಾನಿಗಳ ಹಾಗೂ ಶತಮಾನೋತ್ಸವ ಶಾಶ್ವತ ನೆನಪಿನ ಕೊಡುಗೆಗಳ ಕೊಠಡಿಗಳನ್ನು ಶಾಸಕ ಎಸ್ ಅಂಗಾರ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆ ಪ್ರಮೀಳಾ ಜನಾರ್ಧನ್ ಉದ್ಟಾಟಿಸಿದರು. ದಾನಿಗಳ ನಾಮಫಲಕವನ್ನು ತಾ.ಪಂ ಸದಸ್ಯೆ ತಾರಾ ತಿಮ್ಮಪ್ಪ ಅನಾವರಣಗೊಳಿಸಿದರು. ಆಟದ ಮೈದಾನವನ್ನು ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಂದ ಬಾರ್ಕುಲಿ ಉದ್ಟಾಟಿಸಿದರು. ಬಳಿಕ ಈ ಶಾಲೆಯಲ್ಲಿ ಆರಂಭದಿಂದ ಸೇವೆ ಸಲ್ಲಿಸಿದ ಶಿಕ್ಷಕರಿಗೆ, ಇದೀಗ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕರಿಗೆ, ಸಿಆರ್‍ಪಿ ಪ್ರದೀಪ್ ಬಾಕಿಲರವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಾಗೂ ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಹರೇಕಳ ಹಾಜಬ್ಬರವರನ್ನು ಶಾಲಾ ಶತಮಾನೋತ್ಸವ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.

Also Read  ಅರಂತೋಡು: ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ಪ್ರಧಾನ ಸಮಾರಂಭ


ವೇದಿಕೆಯಲ್ಲಿ ಕೇತ್ರ ಸಂಪನ್ಮೂಲ ವ್ಯಕ್ತಿ ದಿನೇಶ್ ಮಾಚಾರ್, ಎಪಿಎಂಸಿ ಸದಸ್ಯ ಕೊರಗಪ್ಪ, ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ತಿಮ್ಮಪ್ಪ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಆಲಂಕಾರು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಅಬೂಬಕ್ಕರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ, ವಿಠಲ್ ರೈ, ಮೊದಲಾದವರು ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಆಲಂಕಾರು ಗುರುವಂದನೆಯನ್ನು ಪ್ರಸ್ತಾವಿಸಿದರು. ಕಟ್ಟಡ ಸಮಿತಿಯ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕ ಕೆ.ಪಿ. ನಿಂಗರಾಜು ಶಾಲಾ ವರದಿಯನ್ನು ವಾಚಿಸಿದರು. ಶಿಕ್ಷಕ ಪ್ರಕಾಶ್ ಬಾಕಿಲ ವಂದಿಸಿ ನಾರಾಯಣ ಭಟ್, ಪ್ರದೀಪ್ ಬಾಕಿಲ, ರೂಪಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯರ್ಥಿಗಳ ಸಾಂಸ್ಕøತಿಕ ಕರ್ಯಕ್ರಮಗಳು ಮುಂದುವರಿಯಿತು.

error: Content is protected !!
Scroll to Top