ಕಡಬ ಶ್ರೀಕಂಠಸ್ವಾಮಿ, ಮಹಾಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾ ಜಾತ್ರೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಫೆ.04. ಕಡಬ ಶ್ರೀ ಶ್ರೀಕಂಠಸ್ವಾಮಿ ಮತ್ತು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ 14ನೇ ವರ್ಷದ ಪ್ರತಿಷ್ಠಾ ಜಾತ್ರೋತ್ಸವವು ಫೆ.3ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.


ಫೆ.3ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶಪೂಜೆ ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ನಾಗದೇವರಿಗೆ ಮತ್ತು ದೈವಗಳಿಗೆ ತಂಬಿಲ ಸೇವೆ ನಡೆದು ಶ್ರೀದೇವರಿಗೆ ಮಹಾಪೂಜೆ, ನಡೆಯಿತು ಬಳಿಕ ಪ್ರಸಾದ ವಿತರಿಸಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆಯಲ್ಲಿ ಪೂಜೆ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ವೈದಿಕ ಮಂತ್ರಾಕ್ಷತೆ ನಡೆದು ಮಹಾಪೂಜೆ ಬಳಿಕ ಪ್ರಸಾದ ವಿತರಿಸಿ ಅನ್ನಸಂತರ್ಪಣೆ ನಡೆಯಿತು.ದೈವಜ್ಞ ಪ್ರಸಾದ್ ಕೆದಿಲಾಯ, ದೇವಸ್ಥಾನ ಪ್ರಧಾನ ಆರ್ಚಕರು ಕೇಶವ ಬೈಪಾಡಿತ್ತಾಯ ಪೂಜಾ ವಿಧಿ ವಿಧಾನ ನೆರವೇರಿಸಿದರು.ದೇವಸ್ಥಾನದ ಆಡಳಿತಾಧಿಕಾರಿ ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆಯವರು ಭಕ್ತಾದಿಗಳನ್ನು ಬರಮಾಡಿಕೊಂಡು ದೇವರ ಪ್ರಸಾದ ಸ್ವೀಕರಿಸುವಲ್ಲಿ ಸಹಕರಿಸಿದರು.

Also Read  ಕೋವಿಡ್ ಕೇಸ್ : ಇಂದು (ಸೆ.16) ಒಟ್ಟು 31 ಮಂದಿಯಲ್ಲಿ ಕೋರೊನಾ ದೃಢ

ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ನಾರಾಯಣ ಗೌಡ ಅಲುಂಗೂರು,ಮಾಜಿ ಅಧ್ಯಕ್ಷ ಸತೀಶ್ ನಾೈಕ್ ಮೇಲಿನ ಮನೆ,ಎ.ಪಿ.ಎಂ.ಸಿ.ನಿದೇಶಕಿ ಪುಲಸ್ತ್ಯ ರೈ ,ಆಡಳಿತ ಸಮಿತಿ ಮಾಜಿ ಕಾರ್ಯದರ್ಶಿ ಜಿನ್ನಪ್ಪ ಸಾಲಿಯನ್, ಮೋಹನ್ ದಾಸ್ ಕುತ್ಯಾಡಿ,ಮಾಜಿ ಸದಸ್ಯ ಗಂಗಾಧರ ನಾೈಕ್ ಮೋನಪ್ಪ ಗೌಡ ನಾಡೋಳಿ,ನಿವೃತ್ತ ಸೈನಿಕ ಸುಂದರ ಗೌಡ ಅಂಗಣ ,ಪ್ರಮುಖರಾದ ಮಹಾಬಲ ನಾೈಕ್,ದಯಾನಂದ ನಾೈಕ್,ವಾಸುದೇವ ಬೈಪಾಡಿತ್ತಾಯ,ಮಾನ ನಾೈಕ್ ಕುಕ್ಕೆರಬೆಟ್ಟು,ಸಂತೋಷ ಸುವರ್ಣ, ಸಿವಿಲ್ ಇಂಜಿನಿಯರ್ ನಾಗೇಶ್ ಕೋಡಿಂಬಾಳ,ಭೂ ಮಾಪಕ ಪ್ರಭಾಕರ, ಕಾನೂನು ಸಲಹೆಗಾರ ಪ್ರಶಾಂತ್ ಪಂಜೋಡಿ, ನೋಟರಿ ನ್ಯಾಯವಾದಿ ಸುಂದರ ಗೌಡ,ಸುರೇಶ್ ಕಲ್ಲೇಂಬಿ, ಕಿಶನ್ ಕುಮಾರ್ ರೈ ಹರೀಶ್ ನಾೈಕ್, ಕಡಬ ಗ್ರಾ.ಪಂಸದಸ್ಯರಾದ ಶಾಲಿನಿ ಸತೀಶ್ ನಾೈಕ್ ಮೇಲಿನ ಮನೆ ,ಜಯಂತಿ ಗಣಪಯ್ಯ, ಉಷಾ ಸ್ಟುಡಿಯೋ ಮಾಲಕ ಸೀತಾರಾಮ ಗೌಡ,ಸರಸ್ವತಿ ವಿದ್ಯಾಲಯದ ಶಿಕ್ಷಕ ಮಾಧವ.ಕೆ, ಶಾಂತಿ ಗೋಪಾಲ್ ರಾವ್ ,ವಿಜಯಲಕ್ಷ್ಮೀರಾಮ್ ಭಟ್ ಕಡಬ, ಮಾಲಿನಿಬೈಪಾಡಿತ್ತಾಯ, ಲತಾ ಭಟ್ ಕಡಬ, ರೂಪ ಭಟ್, ಸ್ಮಿತಾ ಹೆಬ್ಬಾರ್,ಜ್ಯೋತಿ ಭಟ್, ಕಡಬ ಗ್ರಾಮಕರಣಿಕ ಹರೀಶ್, ಕಂದಾಯ ಇಲಾಖಾ ಸಿಬ್ಬಂದಿ ವಿಜಯ ಕುಮಾರ್, ಸೇವಾಪ್ರತಿನಿಧಿಗಳಾದ ಸವಿತಾ,ಜಯಲಕ್ಷ್ಮೀ,ಸೇರಿದಂತೆ ಊರಪರವೂರ ಭಕ್ತಾದಿಗಳು ಉಪಸ್ಥಿತರಿದದ್ದರು.

Also Read  ಯುವಕನ ಬರ್ಬರ ಹತ್ಯೆ

error: Content is protected !!
Scroll to Top