ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗವಹಿಸಿದ ಮುಸ್ಲಿಂ ಮುಖಂಡರು ► ಸೌಹಾರ್ದತೆಗೆ ಸಾಕ್ಷಿಯಾದ ಗ್ರಾಮೀಣ ಪ್ರದೇಶವಾದ ಮರ್ಧಾಳ

(ನ್ಯೂಸ್ ಕಡಬ) newskadaba.com ಕಡಬ, ಆ.26. ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಮರ್ಧಾಳ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆದ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೆಶೋತ್ಸವದಲ್ಲಿ ಮುಸ್ಲಿಂ ಮುಖಂಡರು ಭಾಗವಹಿಸಿ ಸೌಹಾರ್ದತೆ ಮೆರೆದರು.

 

ಶುಕ್ರವಾರದಂದು ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮರ್ಧಾಳ ತಕ್ವೀಯತ್ತುಲ್ ಇಸ್ಲಾಂ ಮಸೀದಿಯ ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಇಬ್ರಾಹಿಂ ಮುಸ್ಲಿಯಾರ್, ಕಾರ್ಯದರ್ಶಿ ಹನೀಫ್, ಸದಸ್ಯರಾದ ಮಹಮ್ಮದ್ ಕೆ., ಅಬ್ದುಲ್ ರಹಿಮಾನ್, ಲತೀಫ್ ಕೆಜಿಎನ್, ಯೂನುಸ್ ಕೋಡಿಕಂಡ, ಸತ್ತಾರ್ ಪನ್ಯ, ಬಶೀರ್ ಮರ್ಧಾಳ, ಪ್ರಮುಖರಾದ ಯೂಸುಫ್ ಎಂ.ಪಿ., ಮಹಮ್ಮದ್ ಪಿಲ್ಯ, ಅಬ್ದುಲ ರಹಿಮಾನ್ ಕೋಡಿಕಂಡ, ಶಮೀರ್ ಕಲ್ಲಾಜೆ ಸೇರಿದಂತೆ ಅಪಾರ ಮುಸ್ಲಿಂ ಬಾಂಧವರು ಭಾಗವಹಿಸಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಐತ್ತೂರು ಗ್ರಾ.ಪಂ. ಅಧ್ಯಕ್ಷರಾದ ಸತೀಶ್ ಕೆ., ಪುತ್ತೂರು ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಮನೋಹರ್ ರೈ, ಪುತ್ತೂರು ಎ.ಪಿ.ಎಂ.ಸಿ ಸದಸ್ಯರಾದ ಮೇದಪ್ಪ ಗೌಡ ಡೆಪ್ಪುಣಿ, ಮರ್ಧಾಳ ಗ್ರಾ.ಪಂ. ಸದಸ್ಯ ಹರೀಶ್ ಕೋಡಂದೂರು, ಪ್ರಮುಖರಾದ ನಾರಾಯಣ ಶೆಟ್ಟಿ ಹತ್ಯಡ್ಕ, ಸತೀಶ್ ಮೈಕಾಜೆ, ಸುರೇಶ್ ನೈಲ, ಲೋಲಾಕ್ಷ ಮರ್ಧಾಳ, ಉಮೇಶ್ ಬ್ರಹ್ಮಶ್ರೀ ಮೊದಲಾದವರು ಮುಸ್ಲಿಂ ಬಾಂಧವರನ್ನು ಬರಮಾಡಿಕೊಂಡು ಸಿಹಿ ವಿತರಿಸಿದರು. ಒಟ್ಟಿನಲ್ಲಿ ಜಿಲ್ಲೆಯ ಕೆಲವೆಡೆ ಕಳೆದ ಕೆಲವು ತಿಂಗಳುಗಳಿಂದ ಕೋಮು ಹಿಂಸಾಚಾರಗಳು ನಡೆದಿರುವುದರ ಮಧ್ಯೆ ಗ್ರಾಮೀಣ ಪ್ರದೇಶವಾದ ಮರ್ಧಾಳ ಸೌಹಾರ್ದತೆಗೆ ಹೊಸತೊಂದು ಮುನ್ನುಡಿ ಬರೆಯಿತು.

error: Content is protected !!

Join the Group

Join WhatsApp Group