(ನ್ಯೂಸ್ ಕಡಬ) newskadaba.com ಕಡಬ, ಫೆ.04. ಕುಟ್ರುಪಾಡಿ ಗ್ರಾಮದ 4ನೇ ವಾರ್ಡಿನ ಆಶಾ ಕಾರ್ಯಕರ್ತೆ ಜಯಶ್ರೀ ಅವರು ಕರ್ತವ್ಯ ಲೋಪ ಮಾಡುತ್ತಿದ್ದು ಇವರನ್ನು ಆಶಾ ಕಾರ್ಯಕರ್ತೆ ಸೇವೆಯಿಂದ ವಜಾಗೋಳಿಸಬೇಕೆಂಬ ಆ ಭಾಗದ ಗ್ರಾಮಸ್ಥರ ದೂರಿನ ಹಿನ್ನಲೆಯಲ್ಲಿ ಗ್ರಾ.ಪಂ. ಆಡಳಿತ ಮಂಡಳಿ ಜಯಶ್ರೀ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಕಳೆದ ಮಹಿಳಾ ಗ್ರಾಮ ಸಭೆಯಲ್ಲಿ ನಿರ್ಣಯಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಜಯಶ್ರೀ ವಿರುದ್ದ ಪಂಚಾಯತ್ ನಿರ್ಣಯವನ್ನು ಕೈ ಬಿಡದಿದ್ದರೆ ಕುಟ್ರುಪಾಡಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಅವರು ಫೆ.3ರಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಶಾ ಕಾರ್ಯಕರ್ತೆ ಜಯಶ್ರೀ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಕಪೋಕಲ್ಪಿತ ದೂರನ್ನು ಆಧರಿಸಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಜಯಶ್ರೀ ಯವರ ವಿರುದ್ದ ನಿರ್ಣಯ ಬರೆದಿದ್ದು ಇದೊಂದು ವ್ಯವಸ್ಥಿತ ಸಂಚಿನ ಭಾಗವಾಗಿದೆ, ಪಂಚಾಯತ್‍ನ ಕೆಲವೊಂದು ನಿಯಮಗಳನ್ನು ಅಭಿವೃದ್ಧಿ ಅಧಿಕಾರಿಯವರು ಪಾಲನೆ ಮಾಡದೆ ಇರುವುದು ಕಂಡು ಬಂದಿದ್ದು, ದೂರಿನ ಬಗ್ಗೆ ಜಯಶ್ರೀ ಅವರಿಗೆ ನೋಟಿಸು ನೀಡಲಿಲ್ಲ, ಅಲ್ಲದೆ ಪಂಚಾಯತ್ ಗೆ ದೂರು ನೀಡಿದ ಅರ್ಜಿಯಲ್ಲಿ ಗ್ರಾಮಸ್ಥರ ಹೆಸರಿನಲ್ಲಿ ಹಾಕಲಾಗಿರುವ ಸಹಿಯನ್ನು ಪೋರ್ಜರಿ ಮಾಡಲಾಗಿದೆ, ಅದರ ತನಿಖೆ ಆಗಬೇಕು, ಅಲ್ಲದೆ ಜಯಶ್ರೀ ಅವರು ರವಿ ಗೌಡ ಎಂಬವರ ವಿರುದ್ದ ದಲಿತ ದೌರ್ಜನ್ಯ ದೂರು ನೀಡಿದ ಬಳಿಕ ಈ ಬೆಳವಣಿಗೆ ನಡೆದಿರುವುದು, ಈ ಎಲ್ಲ ಘಟನೆಗಳಲ್ಲಿ ಪಂಚಾಯತ್ ಅಧ್ಯಕ್ಷರು ಕಾನೂನು ಮೀರಿ ಕ್ರಮ ಕೈಗೊಂಡಿದ್ದಾರೆ, ಅಲ್ಲದೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಸತ್ಯಾಂಶ ತಿಳಿಯದೆ ನಿರ್ಣಯಕ್ಕೆ ಸಹಿ ಮಾಡಿರುವುದು ಅವರ ಬೇಜಾಬ್ದಾರಿಯಾಗಿದೆ ಈ ಬಗ್ಗೆ ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ದೂರು ನೀಡಲಾಗಿದೆ ಎಂದು ಹೇಳಿದ ಅವರು ಕುಟ್ರುಪಾಡಿ ಗ್ರಾಮ ಪಂಚಾಯತ್ ಮಾಡಿದ ನಿರ್ಣಯವನ್ನು ರದ್ದುಗೊಳಿಸದಿದ್ದರೆ ಪಂಚಾಯತ್ ಎದುರು ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ, ಪತ್ರಿಕಾಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಣ್ಣಿ ಎಲ್ತಿಮಾರ್, ಪುತ್ತೂರು ತಾಲೂಕು ಉಪಾಧ್ಯಕ್ಷ ಮನೋಹರ್ ಕೊಡಿಜಾಲ್, ಆನಂದ ಕೆ.ಪಿ. ನೆಲ್ಯಾಡಿ, ಬಂಟ್ವಾಳ ತಾಲೂಕು ಅಧ್ಯಕ್ಷ ಗಣೇಶ್, ದ.ಸಂ.ಸ ಸಂಘಟನಾ ಸಂಚಾಲಕ ಆನಂದ ಹೊಸ್ಮಠ, ಆಶಾ ಕಾರ್ಯಕರ್ತೆ ಜಯಶ್ರೀರವರು ಉಪಸ್ಥಿತರಿದ್ದರು.