(ನ್ಯೂಸ್ ಕಡಬ) newskadaba.com ಪುತ್ತೂರು, ಜ.30. ಕೆಮ್ಮಾಯಿ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿಯ ವಾರ್ಷಿಕ ಮಹಾಸಭೆಯು ಗೌರವಾಧ್ಯಕ್ಷರಾದ ಪುತ್ತೂರು ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಮಿಟಿಯ ಜೊತೆ ಕಾರ್ಯದರ್ಶಿ ಹಕೀಂ ಡಿ.ಕೆ ಗತವರ್ಷದ ವರದಿ ವಾಚಿಸಿದರು. ಸಭೆಯು ಸರ್ವಾನುಮತದಿಂದ ವರದಿಯನ್ನು ಅಂಗೀಕರಿಸಿತು.
ನಂತರ 2020-21 ಮುಂದಿನ ಒಂದು ವರ್ಷದ ಅವಧಿಗೆ ಪ್ರಸ್ತುತ ಕಮಿಟಿಯನ್ನು ಮುಂದುವರೆಸಲಾಯಿತು. ಗೌರವಾಧ್ಯಕ್ಷರಾಗಿ ಪುತ್ತೂರು ತಂಙಳ್, ಅಧ್ಯಕ್ಷರಾಗಿ ಬಶೀರ್ ಹಾಜಿ, ಉಪಾಧ್ಯಕ್ಷರಾಗಿ ಶರೀಫ್ (ಸಮುನು), ಕಾರ್ಯದರ್ಶಿ ಹಸನ್ ಹಾಜಿ, ಜೊತೆ ಕಾರ್ಯದರ್ಶಿಯಾಗಿ ಹಕೀಂ ಡಿ.ಕೆ., ಖಜಾಂಚಿಯಾಗಿ ಅಬ್ದುಲ್ ಕಾದರ್ ಮೊನಾಕ ಹಾಗೂ ಲತೀಫ್ ಹಾಜಿ ಫ್ಯಾನ್ಸಿ ಪಾರ್ಕ್, ಅಬ್ದುಲ್ ರಹಿಮಾನ್ ಹಾಜಿ ಅರಮನೆ, ಉಮ್ಮರ್ ಡಿ.ಕೆ., ಡಿ.ಕೆ ಅಶ್ರಫ್ ಹಾಜಿ, ಹಮೀದ್ ಹೈಫ್ಯಾನ್ಸಿ, ಉಮರ್ ಮಸ್ತಂ, ಬಶೀರ್ ಉಸ್ತಾದ್, ಅಬೂಬಕರ್ ಶೂ ಬಝಾರ್, ಖಾಸಿಂಚ ಡಿ.ಕೆ., ಶಮೀರ್ ಹಾಜಿ ಡಿ.ಕೆ, ಶಂಸುದ್ದೀನ್, ಇಕ್ಬಾಲ್ ಅಂಜು, ಎಮ್.ಜಿ.ಹಮೀದ್, ಆರ್.ಕೆ.ಹನೀಫ್ ರವರನ ಸದಸ್ಯರಾಗಿ ಸಮಿತಿಗೆ ನೇಮಕ ಮಾಡಲಾಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಖತೀಬ್ ಉಸ್ತಾದ್ ಇಕ್ಬಾಲ್ ಸಖಾಫಿ, ಅಲ್ಲಾಹನ ಮಸೀದಿಗೆ ಸೇವೆ ಮಾಡುವುದು ಸ್ವರ್ಗದ ದಾರಿಯನ್ನು ಸುಲಭಗೊಲಿಸಿದಂತೆ. ಅಲ್ಲಾಹನ ಪ್ರೀತಿಗೆ ಪಾತ್ರರಾಗಲು ಇಂತಹ ಉಪಯುಕ್ತ ಕೆಲಸಗಳನ್ನು ಮಾಡೋಣ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪದೇಶ ನೀಡಿದ ತಂಙಳ್ ಅವರು ಒಂದು ಊರಿನ ಸುಪ್ರೀಂ ಕೋರ್ಟ್ ಮಸೀದಿ ಕಮಿಟಿಯಾಗಿದ್ದು ಅದನ್ನು ಪ್ರತೀ ಮುಸಲ್ಮಾನರು ಗೌರವಿಸಬೇಕಿದೆ ಎಂದರು.
ಸದರ್ ಉಸ್ತಾದ್ ಕಬೀರ್ ಫಾಳಿಲಿ ಸ್ವಾಗತಿಸಿದರು.
ಹಕೀಂ ಡಿ.ಕೆ ವಂದಿಸಿದರು. ಕಾರ್ಯಕ್ರಮದಲ್ಲಿ ಜಮಾಅತಿನ 60ಕ್ಕೂ ಮಿಕ್ಕಿ ಸದಸ್ಯರು ಭಾಗವಹಿಸಿದ್ದರು. ಅಧ್ಯಕ್ಷರಾದ ಬಶೀರ್ ಹಾಜಿ ಎ.ಕೆ. ಅವರ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.