ಬಹು ನಿರೀಕ್ಷಿತ ‘ನಮೋ’ ಚಲನಚಿತ್ರ ನಾಳೆ(ಜ.31) ತೆರೆಗೆ ➤ ಕಡಬದ ನಟ ಮಹೇಶ್ ರಾಜ್ ನಟಿಸಿರುವ ಚಿತ್ರ

(ನ್ಯೂಸ್ ಕಡಬ) newskadaba.com ಕಡಬ, ಜ.30. ಕಡಬದ ನಟ ಮಹೇಶ್ ರಾಜ್ ಅಭಿನಯಿಸಿರುವ ‘ನಮೋ’ ಚಿತ್ರ ನಾಳೆ (ಜ.31) ತೆರೆಗೆ ಬರಲಿದೆ.

ಕಡಬ ತಾಲೂಕಿನ 102ನೇ ನೆಕ್ಕಿಲಾಡಿ ಗ್ರಾಮದ ಕೋರಿಯಾರ್ ನಿವಾಸಿಯಾಗಿರುವ ಮಹೇಶ್ ರಾಜ್ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ‌. ಮಾಮು ಟೀ ಅಂಗಡಿ, ಜಗತ್ ಕಿಲಾಡಿ, ಪಾನಿಪುರಿ ಚಿತ್ರಗಳಲ್ಲಿ ಅಭಿನಯಿಸಿದ್ದು, ನಮೋ ಚಿತ್ರವು ನಾಳೆ ತೆರೆಗೆ ಬರಲಿದೆ. ಸರ್ವಸ್ಯ ನಾಟ್ಯಂ ಹಾಗೂ ಹ್ಯಾಬಿಟ್ ಚಿತ್ರದ ಚಿತ್ರೀಕರಣವು ನಡೆಯುತ್ತಿದೆ. ನಮೋ ಚಿತ್ರವನ್ನು ಪುಟ್ಟರಾಜ ಸ್ವಾಮಿ ನಿರ್ದೇಶಿಸಿದ್ದು, ಸಾಯಿ ಸರ್ವೇಶ್ ರವರ ಸಂಗೀತದೊಂದಿಗೆ ನಿರ್ಮಾಪಕರಾಗಿ ಮಧುಸೂದನ್ ಹಾಗೂ ಮಹೇಶ್ ರಾಜ್, ಮಣಿ, ಬಿರಾ, ಪುಟ್ಟರಾಜ್ ನಟಿಸಿದ್ದಾರೆ. ನಮೋ ಚಿತ್ರದ ಚಿತ್ರೀಕರಣವು ಕಾರವಾರ ಹಾಗೂ ಗೋವಾದಲ್ಲಿ ನಡೆದಿದೆ.

Also Read  ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ.!

error: Content is protected !!
Scroll to Top