ಮಂಗಳೂರಿನಲ್ಲಿ ಬಿಜೆಪಿ ಸಮಾವೇಶ: ರಸ್ತೆ ಸಂಚಾರದಲ್ಲಿ ಮಾರ್ಪಾಡು

ಮಂಗಳೂರು, ಜ. 27: ದ.ಕ. ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ಸಮಾವೇಶ ಕೂಳೂರಿನ ಗೋಲ್ಡ್‌ ಫಿಂಚ್ ಮೈದಾನದಲ್ಲಿ ಸೋಮವಾರ ಆಯೋಜಿಸಿಲಾಗಿದೆ.

 

ಸಮಾವೇಶದ ಹಿನ್ನಲೆಯಲ್ಲಿ ಕೆಲವು ಮಾರ್ಗ ಗಳಲ್ಲಿ ವಾಹನಗಳ ಸಂಚಾರ ಬದಲಾಯಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸಲು ಉಡುಪಿ ಹಾಗೂ ಮಂಗಳೂರು ನಗರದಿಂದ ಬರುವ ಸಾರ್ವಜನಿಕರು ಕಡ್ಡಾಯವಾಗಿ ತಮ್ಮ ವಾಹನಗಳನ್ನು ನಿಗದಿತ ಸ್ಥಳದಲ್ಲಿಯೇ ಪಾರ್ಕ್‌ ಮಾಡಬೇಕು ಎಂದು ಸೂಚಿಸಲಾಗಿದೆ.

ಸೋಮವಾರ ಬೆಳಿಗ್ಗೆ 9ರಿಂದ ಸಂಜೆ ರಾತ್ರಿ 9ರವರೆಗೆ ಕೆಲವು ಮಾರ್ಗಗಳಲ್ಲಿ ಸಂಚಾರ ನಿಷೇಧ ಮಾಡಲಾಗಿದ್ದು, ಈ ವೇಳೆಯಲ್ಲಿ ಉಡುಪಿಯಿಂದ ಬೆಂಗಳೂರು ಕಡೆಗೆ ಚಲಿಸುವ ವಾಹನಗಳು ಪಡುಬಿದ್ರಿಯಲ್ಲಿ ತಿರುವು ತೆಗೆದುಕೊಂಡು ಕಾರ್ಕಳ–ಧರ್ಮಸ್ಥಳ, ಶಿರಾಡಿ ಘಾಟಿ ಮಾರ್ಗವಾಗಿ ಬೆಂಗಳೂರಿಗೆ ತೆರಳಬೇಕು.ಬೆಂಗಳೂರಿನಿಂದ ಮಂಗಳೂರಿಗೆ ಬರುವ ವಾಹನಗಳು ಮೆಲ್ಕಾರ್‌ನಲ್ಲಿ ತಿರುವು ಪಡೆದು ಬಿ.ಸಿ.ರೋಡ್‌ ಮಾರ್ಗ ವಾಗಿ ಕೊಣಾಜೆ–ತೊಕ್ಕೊಟ್ಟು ಮೂಲಕ ಮಂಗಳೂರು ತಲುಪಬಹುದು. ‌ಬಿ.ಸಿ.ರೋಡ್‌ನಿಂದ ಪೊಳಲಿ ಕೈಕಂಬ ಮಾರ್ಗವಾಗಿ ಮಂಗಳೂರಿಗೆ ಬರುವವರಿಗಾಗಿ ಬಿ.ಸಿ.ರೋಡ್‌ ಕೈಕಂಬ ಬಳಿ ಮತ್ತೊಂದು ‘ಡೈವರ್ಶನ್‌’ ನೀಡಲಾಗಿದೆ. ಬಿ.ಸಿ.ರೋಡ್‌ ಮತ್ತು ಪಂಪ್‌ವೆಲ್‌ನಿಂದ ಬರುವ ವಾಹನಗಳು ನಂತೂರು, ಕೈಕಂಬ ಮತ್ತು ಮೂಡುಬಿದಿರೆ ಮಾರ್ಗವಾಗಿ ಸಾಗಬೇಕು. ಕೊಟ್ಟಾರಚೌಕಿ ಮಾರ್ಗದಲ್ಲಿ ಬರುವ ವಾಹನಗಳು ಕೆಪಿಟಿ, ನಂತೂರು ಮತ್ತು ಮೂಡುಬಿದಿರೆ ಮಾರ್ಗವಾಗಿ ಸಂಚರಿಸಬೇಕು.

Also Read  ಆಟೋ ಚಾಲಕ ಆತ್ಮಹತ್ಯೆಗೆ ಶರಣು..!

ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರ ಮಾರ್ಗ ಬದಲಾವಣೆಗೆ ಸಹಕರಿಸಬೇಕು ಎಂದು ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಮನವಿ ಮಾಡಿದ್ದಾರೆ.

ಸಮಾವೇಶ ನಡೆಯುವ ಗೋಲ್ಡ್ ಪಿಂಚ್ ಸಿಟಿಯ ಮೈದಾನದಲ್ಲಿಯೇ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಬಿಜೆಪಿಯ ಬೂತ್ ಗಳಿಂದ 800ಕ್ಕೂ ಅಧಿಕ ಬಸ್ ಗಳ ಮೂಲಕ ಕಾರ್ಯಕರ್ತರು ಬರಲಿದ್ದಾರೆ.ಅಲ್ಲದೆ ಇತರೆ ಸಾರ್ವಜನಿಕರು ಬೇರೆ ಬೇರೆ ವಾಹನಗಳಲ್ಲಿ ಬರಲಿದ್ದಾರೆ. ಹೀಗಾಗಿ ಸ್ಥಳದಲ್ಲಿ 1000ಕ್ಕೂ ಅಧಿಕ ಬಸ್ 1000ಕ್ಕೂ ಅಧಿಕ ಕಾರು 2000ಕ್ಕೂ ಅಧಿಕ ಬೈಕ್ ಪಾರ್ಕಿಂಗ್ ಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

error: Content is protected !!
Scroll to Top