ಬೆಂಗಳೂರು: ಪೊಲೀಸ್ ಮಾಹಿತಿದಾರನ ಬರ್ಬರ ಕೊಲೆ

ಬೆಂಗಳೂರು, ಜ.27: ಪೊಲೀಸ್ ಮಾಹಿತಿದಾರನೋರ್ವನನ್ನು ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊಲೆಯಾದವರನ್ನು ಪ್ರಭು ಅಲಿಯಾಸ್ ಅಪ್ಪು(27) ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಸಿದ್ದೇಶ್ವರ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಭು ಬ್ಯಾಂಕ್‌ನಲ್ಲಿ ಚೆಕ್ ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಪ್ರಭು ಅವರಿಗೆ ಹಲವು ಬಾರಿ ಇರಿದಿದ್ದಾರೆ.

ರಕ್ತಸ್ರಾವದಿಂದ ಪ್ರಭು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದರು. ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Also Read  ಬಿಗ್ ಬಾಸ್ ಸಂಜನಾ ಕಾಳೆಲೆದ ನೆಟ್ಟಿಗರು ➤ ಫಸ್ಟ್‌ ನೈಟ್ ಗೆ ಏನು ಬೇಕೆಂದು ಕೇಳಿದ ಅಭಿಮಾನಿಗೆ ಸ್ಮಾರ್ಟ್ ಉತ್ತರ

ಈ ಹಿಂದೆ ಇದೇ ಪ್ರಭು ಕಳ್ಳರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಅಲ್ಲದೆ ಎರಡು ಬಾರಿ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಕೊಟ್ಟಿದ್ದರು. ಇದೇ ಹಳೇ ದ್ವೇಷ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಆತನನ್ನು ಕೊಲೆಗೈದಿರಬಹುದು ಎಂದು ಎನ್ನಲಾಗಿದೆ.

error: Content is protected !!
Scroll to Top