
ಬೆಂಗಳೂರು, ಜ.27: ಪ್ರಖ್ಯಾತ ನಿರೂಪಕ, ಕಿರುತರೆ ನಟ ಸಂಜೀವ್ ಕುಲಕರ್ಣಿ (49) ಅನಾರೋಗ್ಯದಿಂದ ಶನಿವಾರದಂದು ನಿಧನ ಹೊಂದಿದ್ದಾರೆ. ಸಂಜೀವ್ ಕಳೆದ ಹಲವು ವರ್ಷಗಳಿಂದ ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
ಸಂಜೀವ ಕುಲಕರ್ಣಿಯವರು ಕಿರುತರೆ ನಟರಾಗಿದ್ದು, ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಪ್ರಖ್ಯಾತ ನಿರೂಪಕರೂ ಆಗಿದ್ದು, ವಿವಿಧ ಕಾರ್ಯಕ್ರಮಗಳ ವೇದಿಕೆಯಲ್ಲಿ ನಿರೂಪಣೆ ಮಾಡಿ ಮೆಚ್ಚುಗೆ ಗಳಿಸಿದ್ದಾರೆ.
ಅಂತ್ಯಕ್ರಿಯೆಯನ್ನು ಚಾಮರಾಮಪೇಟೆಯ ಟಿಆರ್’ ಮಿಲ್ ಬಳಿಯ ಸ್ಮಶಾನದಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಂಜೀವ ಕುಲಕರ್ಣಿಯವರ ಕುಟುಂಬ ಮೂಲಗಳು ಮಾಹಿತಿ ನೀಡಿವೆ.
ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.