ಪುತ್ತೂರು: ಚಿನ್ನದ ಬೆಂಡೋಲೆ ನುಂಗಿದ ಹುಂಜ ► ಚಿನ್ನ ನುಂಗಿ ಸಾವನ್ನು ಮೈಮೇಲೆ ಎಳೆದುಕೊಂಡ ಕೋಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.25. ಹುಂಜ ಕೋಳಿಯೊಂದು ಮಹಿಳೆಯೊಬ್ಬರ ಚಿನ್ನದ ಬೆಂಡೋಲೆಯನ್ನು ನುಂಗಿದ ಪರಿಣಾಮ ತನ್ನ ಸಾವನ್ನು ತಾನೇ ಮೈಮೇಲೆ ಎಳೆದುಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ತೆಂಕಿಲ ಎಂಬಲ್ಲಿ ನಡೆದಿದೆ.

ಕೋಳಿ ಸಾಕುತ್ತಿದ್ದ ಮನೆಯೊಡತಿಯೊಬ್ಬರು ಹೇಂಟೆಯೊಂದು ಹುಂಜಗಳಿದ್ದ ಗೂಡಿನೊಳಗೆ ನುಗ್ಗಿದಾಗ ಅದನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ಮಹಿಳೆಯು ಗೂಡಿನೊಳಗೆ ತಲೆ ಹಾಕಿದ್ದನ್ನು ಗಮನಿಸಿದ ಹುಂಜವೊಂದು ಮಹಿಳೆಯ ಬೆಂಡೋಲೆಯನ್ನು ನುಂಗಿದೆ. ಈ ಸಂದರ್ಭದಲ್ಲಿ ಕಿವಿ ನೋವಿನಿಂದ ಕಿರುಚಿದ ಮಹಿಳೆಯ ಧ್ವನಿ ಕೇಳಿ ಮನೆಯವರು ವಿಚಾರಿಸಿದಾಗ ಹುಂಜ ಕಿವಿಯ ಬೆಂಡೋಲೆ ನುಂಗಿದ ಘಟನೆ ವಿವರಿಸಿದ್ದಾರೆ.

Also Read  ಪುತ್ತೂರಿನಿಂದ ಮಂಗಳೂರಿಗೆ ಖಾಸಗಿ ಬಸ್ಸು ಓಡಾಟ ಆರಂಭ...!!!

ಸುಮಾರು ಏಳೆಂಟು ಕಿಲೋ ತೂಕದ ಹುಂಜದ ಹೊಟ್ಟೆಯಿಂದ ಚಿನ್ನದ ಬೆಂಡೋಲೆಯನ್ನು ಹೇಗೆ ತೆಗೆಯುವುದು ಎಂದು ಚಿಂತೆಯಲ್ಲಿದ್ದ ಮನೆಮಂದಿ ಕೊನೆಗೆ ಕೋಳಿಯನ್ನು ಕೊಂದು ಕಬಾಬ್ ಮಾಡಿದ್ದಾರೆ. ಹುಂಜದ ಹೊಟ್ಟೆಯಿಂದ ಚಿನ್ನದ ಬೆಂಡೋಲೆ ತೆಗೆದು ಮತ್ತೆ ಮಹಿಳೆಯ ಕಿವಿಗೆ ಹಾಕಲಾಯಿತು. ಈ ಮೂಲಕ ಬೆಂಡೋಲೆ ನುಂಗಿದ ಹುಂಜ ತನ್ನ ಸಾವನ್ನು ತಾನೇ ಮೈಮೇಲೆ ಎಳೆದುಕೊಂಡಿದೆ.

error: Content is protected !!
Scroll to Top