ಬೆಂಗಳರು, ಜ.26: ಬಿಬಿಎಂಪಿ ನಗರ ಜಿಲ್ಲೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿರುವ 71ನೇ ಗಣರಾಜ್ಯೋತ್ಸವ ನಗರದ ಕಬ್ಬನ್ ರಸ್ತೆಯ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆರಂಭಗೊಂಡಿದ್ದು, ರಾಜ್ಯಪಾಲ ವಜುಭಾಯ್ ವಾಲಾ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.

ರಾಜ್ಯಪಾಲ ವಿ.ಆರ್ ವಾಲಾ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿದ್ದು, ಈ ವೇಳೆ ಭಾರತೀಯ ವಾಯುಪಡೆಯಿಂದ ಹೆಲಿಕಾಪ್ಟ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ನಂತರ ರಾಜ್ಯಪಾಲರು ಪರೇಡ್ ವೀಕ್ಷಿಸಿ, ಗೌರವ ನಂದನೆ ಸ್ವೀಕರಿಸಿ ನಾಡಿದನ ಜನತೆಗೆ ಗಣರಾಜ್ಯೋತ್ಸವ ಸಂದೇಶವನ್ನು ಸಾರಿದರು.

Also Read  ಮಾದಕ ದ್ರವ್ಯದ ದುಶ್ಚಟದಿಂದ ದೇಶ ಮುಕ್ತವಾಗಬೇಕು: ಯು.ಟಿ.ಖಾದರ್