ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಶಿಕ್ಷಕನಿಗೆ 20 ವರ್ಷ ಕಠಿಣ ಸಜೆ

ಕಾಸರಗೋಡು, ಜ.26 : ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ 20 ವರ್ಷಗಳ ಕಠಿಣ ಸಜೆ ವಿಧಿಸಿದೆ.

 

ಆರೋಪಿ ಶಿಕ್ಷಕ ಕನಾರೂರು ಗ್ರಾಮದ ಪೆರಿಯಾಲಿ ಹೌಸ್‌ನ ರಾಜನ್‌.ಪಿ.ನಾಯರ್‌ ಯಾನೆ ರಾಜನ್‌ ಮಾಸ್ತರ್‌  ಸರಕಾರಿ ಶಾಲೆಯ ವಿದ್ಯಾರ್ಥಿನಿಗೆ ಐ.ಟಿ.ಸ್ಮಾರ್ಟ್ ಕೊಠಡಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾಗಿ ರಾಜಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿ ದೋಷಿ ಎಂದು ಸಾಬೀತುಪಡಿಸಿದ ನ್ಯಾಯಾಲಯ ಆತನಿಗೆ 2೦ ವರ್ಷ ಕಠಿಣ ಸಜೆ, ೨೫ ಸಾವಿರ ರೂಪಾಯಿ ದಂಡ, ದಂಡ ಪಾವತಿಸದಿದ್ದಲ್ಲಿ 2 ವರ್ಷ ಹೆಚ್ಚುವರಿ ಸಜೆ ವಿಧಿಸಿ ತೀರ್ಪು ನೀಡಿದೆ. ಹಾಗೆಯೇ ಲೈಂಗಿಕ ಕಿರುಕುಳಕೊಳ್ಳಗಾದ ವಿದ್ಯಾರ್ಥಿನಿಗೆ ಸರಕಾರ 10 ಲಕ್ಷ ರೂಪಾಯಿ ನೀಡಬೇಕೆಂದು ತೀರ್ಪಿನಲ್ಲಿ ಆದೇಶಿಸಲಾಗಿದೆ.

Also Read  ಬೆಳ್ತಂಗಡಿ: ಹೆದ್ದಾರಿ-73ರ ಬಳಿ ರಸ್ತೆಗೆ ಉರುಳಿದ ಮರ ➤ ಸಂಚಾರ ಅಸ್ತವ್ಯಸ್ತ

 

error: Content is protected !!
Scroll to Top