ಬೆಂಗಳೂರು, ಜ.26: ಕರ್ನಾಟಕದ ಹಾಲಕ್ಕಿ ಬುಡಕಟ್ಟು ಸಮುದಾಯದ ತುಳಸಿ ಗೌಡ, ಹಾಗೂ ಅಕ್ಷರ ಸಂತ ಹರೇಳ ಹಾಜಬ್ಬ ಸೇರಿ ಒಟ್ಟು 141 ಮಂದಿಗೆ ಪ್ರತಿಷ್ಠಿತ ಪದ್ಮ  ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಸಮಾಜ ಸೇವೆ ಅರಣ್ಯ ರಕ್ಷಣೆಗೆ ತುಳಸಿ ಗೌಡ ಅವರನ್ನು ಗುರುತಿಸಿ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಶಿಕ್ಷಣದ ಸಹಾಯವಿಲ್ಲದೇ ಅರಣ್ಯದಲ್ಲಿ ಲಭ್ಯವಾಗುವ ಅನೇಕ ವಿಧದ ಗಿಡ, ಗಿಡಮೂಲಿಕೆಗಳ ಕುರಿತು ಅಪಾರವಾದ ಅರಿವನ್ನು ಹೊಂದಿರುವುದು ತುಳಸಿ ಗೌಡ ಅವರ ಹೆಗ್ಗಳಿಕೆ.

Also Read  ದೈಹಿಕ ಆರೋಗ್ಯಕ್ಕೆ ಕಾಳಜಿ ವಹಿಸಿದಷ್ಟು ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಿ- ರವೀಂದ್ರ ಎಂ. ಜೋಶಿ

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡದ ಹರೇಳ ಹಾಜಪ್ಪ ಅವರಿಗೆ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ.