ಮಂಗಳೂರು ಸ್ಫೋಟಕ ಪ್ರಕರಣ: ಆರೋಪಿ ಆದಿತ್ಯ ರಾವ್ ವಿರುದ್ಧ ಮತ್ತೊಂದು ದೂರು ದಾಖಲು

ಮಂಗಳೂರು, ಜ.23: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇಟ್ಟಿದ್ದ ಆರೋಪಿ ಆದಿತ್ಯರಾವ್ ಸದ್ಯ ಮಂಗಳೂರು ಪೊಲೀಸರ ವಶದಲ್ಲಿದ್ದು ಎಸಿಪಿ ಬೆಳ್ಯಪ್ಪ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಇದೀಗ ಆರೋಪಿ ಆದಿತ್ಯರಾವ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

Nk Kukke

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಸ್ಫೋಟಕ ಇಟ್ಟ ಬಳಿಕ ಅದೇದಿನ ಜ.20ರಂದು ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಿದ್ದಾಗಿ ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ಇಂಡಿಗೋ ಅಧಿಕಾರಿಗಳು ಈ ದೂರು ನೀಡಿದ್ದಾರೆ. ಅಂದು ಮಧ್ಯಾಹ್ನ 3:15ಕ್ಕೆ ತೆರಬೇಕಿದ್ದ ವಿಮಾನವನ್ನು ನಿಲ್ದಾಣದ ಅಧಿಕಾರಿಗಳು ನಿಲ್ಲಿಸಿ, ಎಲ್ಲ ಪ್ರಯಾಣಿಕರು ಹಾಗೂ ಲಗೇಜ್‌ಗಳನ್ನು ತಪಾಸಣೆ ನಡೆಸಲಾಗಿತ್ತು. ಬಳಿಕ ವಿಮಾನವು ರಾತ್ರಿ 9:17ಕ್ಕೆ ಬೆಂಗಳೂರು ತೆರಳಿತ್ತು. ಈ ಹಿನ್ನೆಲೆಯಲ್ಲಿ ಇಂಡಿಗೋ ಅಧಿಕಾರಿಗಳು ಆದಿತ್ಯರಾವ್ ವಿರುದ್ಧ ಮಂಗಳೂರಿನ ಬಜ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Also Read  ಮರ್ಧಾಳ: ಕಾರುಗಳ ಓವರ್‌ಟೇಕ್ ಭರದಲ್ಲಿ ರಸ್ತೆ ಪಕ್ಕ ಸಿಲುಕಿಕೊಂಡ ಕೆಎಸ್ಸಾರ್ಟಿಸಿ ಬಸ್ ➤‌ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ಅನಾಹುತ

error: Content is protected !!
Scroll to Top