ಕುಂದಾಪುರ: ಲಾರಿ ಢಿಕ್ಕಿ ಹೊಡೆದು ಮಹಿಳೆ ಮೃತ್ಯು

ಕುಂದಾಪುರ, ಜ.22: ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾ.ಹೆ.66ರಲ್ಲಿ ಶಿರೂರು ಗ್ರಾಪಂ ಎದುರುಗಡೆ ನಡೆದಿದೆ.

Nk Kukke

ಮೃತರನ್ನು ವೆಂಕಮ್ಮ ಪೂಜಾರ್ತಿ(70)ಎಂದು ಗುರುತಿಸಲಾಗಿದೆ. ವಿಆರ್‌ಎಲ್ ಲಾಜಿಸ್ಟಿಕ್‌ಗೆ ಸೇರಿದ ಸರಕು ಸಾಗಾಟದ ಲಾರಿ ಮಹಿಳೆಗೆ ಢಿಕ್ಕಿ ಹೊಡೆದಿದೆನ್ನಲಾಗಿದೆ. ಲಾರಿಯ ಚಕ್ರ ವೃದ್ಧೆಯ ಮೇಲೆ ಹರಿದಿದ್ದು, ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top