ಬಂಟ್ವಾಳ: ವನ್ಯ ಜೀವಿಗಳ ಕೊಂಬುಗಳ ಅಕ್ರಮ ಸಾಗಾಟ; ಓರ್ವ ಪೊಲೀಸ್ ವಶಕ್ಕೆ

ಬಂಟ್ವಾಳ, ಜ 21: ಅಳವಿನಂಚಿನಲ್ಲಿರುವ ವನ್ಯ ಜೀವಿಗಳಾದ ಕೃಷ್ಣ ಮೃಗ ಮತ್ತು ಜಿಂಕೆ ಮೃಗದ ಕೊಂಬುಗಳನ್ನು ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಒರ್ವನನ್ನು ವಳವೂರು ಎಂಬಲ್ಲಿ ಮಂಗಳೂರು ಸಿಐಡಿ ಅರಣ್ಯ ಸಂಚಾರಿ ದಳದವರು ಮತ್ತು ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ತಾಲೂಕಿನ ಕಂಕನಾಡಿ ಗ್ರಾಮದ ಉಜ್ಜೋಡಿ ನಿವಾಸಿ ಗಂಗಾದರ ಅವರ ಮಗ ದಿಲೀಪ್ ಕುಮಾರ್ ಜಿ. (30) ಬಂಧಿತ ಆರೋಪಿ. ಬಂಧಿತನ ಕೈಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಕೃಷ್ಣ ಮೃಗದ ಎರಡು ಕೊಂಬುಗಳು ಹಾಗೂ ಜಿಂಕೆ ಮೃಗದ 4 ಕೊಂಬುಗಳು ಒಟ್ಟು 6 ಕೊಂಬುಗಳು ಮತ್ತು 3 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ದಿಲೀಪ್ ಮಂಗಳೂರು ಕಡೆಯಿಂದ ಮಾರಾಟ ಮಾಡುವ ಉದ್ದೇಶದಿಂದ ಬಿ.ಸಿ.ರೋಡು ಕಡೆಗೆ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ತುಂಬೆ ಗ್ರಾಮದ ಬಂಟ ಭವನದ ಬಳಿ ವಳವೂರು ಎಂಬಲ್ಲಿ ದಾಳಿ ನಡೆಸಿದ ಅರಣ್ಯ ಸಂಚಾರಿ ಪೊಲೀಸರು ಹಾಗೂ ಬಂಟ್ವಾಳ ಆರಣ್ಯ ಅಧಿಕಾರಿಗಳು ಆರೋಪಿ ಹಾಗೂ ಸ್ವತ್ತನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Also Read  ರೈಲ್ವೇ ಹಳಿಯ ಗುಜರಿಯನ್ನು ಕದ್ದು ಸಾಗಾಟ - ಕಡಬದ ಇಬ್ಬರ ಬಂಧನ

Nk Kukke

ಸಿಐಡಿ ಅರಣ್ಯ ಘಟಕ ಬೆಂಗಳೂರು ಎಡಿಜಿಪಿ ಡಾ.ರವೀಂದ್ರ ನಾಥನ್ ಮತ್ತು ಸಿಐಡಿ ಅರಣ್ಯ ಮಡಿಕೇರಿ ಘಟಕದ ಪೊಲೀಸ್ ಅದೀಕ್ಷಕ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಸಿಐಡಿ ಅರಣ್ಯ ಸಂಚಾರದ ಪಿಎಸ್ಸೈ ಪುರುಷೋತ್ತಮ, ಸಿಬ್ಬಂದಿ ಜಗನ್ನಾಥ ಶೆಟ್ಟಿ, ಉದಯ ನಾಯ್ಕ, ಮಹೇಶ್, ದೇವರಾಜ್, ಪ್ರವೀಣ್ ಸುಂದರ್ ಶೆಟ್ಟಿ ಹಾಗೂ ಬಂಟ್ವಾಳ ಅರಣ್ಯ ವಲಯ ಅಧಿಕಾರಿ ಸುರೇಶ್ ಸಿಬ್ಬಂದಿ ಪ್ರೀತಂ, ವಿನಯ್, ಜಿತೇಶ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Also Read  ಬಂಟ್ವಾಳ: ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ

error: Content is protected !!
Scroll to Top