ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ

ವಿರಾಜಪೇಟೆ, ಜ.16: ಖ್ಯಾತ ಚಿತ್ರ ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಜ.16ರ ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ಮಂದಣ್ಣ ಅವರ ಮನೆ ‘ಸೆರೆನಿಟಿ’ ಮೇಲೆ ದಾಳಿ ನಡೆಸಿದ್ದು, ಬೆಳಗ್ಗೆ 7.30ರಿಂದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಟ್ಯಾಕ್ಸಿ ಮೂಲಕ ಆಗಮಿಸಿದ 10ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಮನೆಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದೆ. ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್’ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ಹಲವು ಹಿಟ್ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ರಶ್ಮಿಕಾ ಅವರ ಆದಾಯ ಕಳೆದ ಮೂರು ವರ್ಷಗಳ ಹಿಂದೆಗೆ ಹೋಲಿಸಿದ್ರೆ ಏರುಗತಿಯಲ್ಲಿ ಆದಾಯ ಹೆಚ್ಚಳವಾಗಿದೆ . ಈ ಹಿನ್ನಲೆಯಲ್ಲಿ ಆದಾಯ ಅಧಿಕಾರಿಗಳು ಕಣ್ಣಿಟ್ಟದ್ದರು ಎಂದು ತಿಳಿದುಬಂದಿದೆ. ರಶ್ಮಿಕಾ ಮಂದಣ್ಣ ಅವರು ಕನ್ನಡದ ಕಿರಿಕ್ ಪಾರ್ಟಿ ಮೂಲಕ ಚಿತ್ರಂಗ ಪ್ರವೇಶಿಸಿದ್ದರು. ದಾಳಿ ವೇಳೆ ಶೂಟಿಂಗ್ ಗಾಗಿ ಕಾರಣದಿಂದ ರಶ್ಮಿಕಾ ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ.

Also Read  ಮುಡಾ ಪ್ರಕರಣ- ಸೆ. 09ರ ವರೆಗೆ ಸಿಎಂ ಸಿದ್ದರಾಮಯ್ಯಗೆ ರಿಲೀಫ್..!

 

error: Content is protected !!
Scroll to Top