ಪ್ರಾಂತೀಯ ಮಟ್ಟದ ಯೋಗಾ ಸ್ಪರ್ಧೆಯಲ್ಲಿ ಸರಸ್ವತೀ ವಿದ್ಯಾಲಯಕ್ಕೆ ಪ್ರಥಮ

(ನ್ಯೂಸ್ ಕಡಬ) newskadaba.com ಕಡಬ, ಆ.24, ಹುಬ್ಬಳ್ಳಿ ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭಾರತೀ ಅಖಿಲ ಭಾರತ ಶಿಕ್ಷ ಸಂಸ್ಥಾನ ಆಶ್ರಯದಲ್ಲಿ ನಡೆದ ಪ್ರಾಂತೀಯ ಮಟ್ಟದ ಯೋಗಾಸನ ಸ್ಪರ್ದೆಯಲ್ಲಿ ಕಡಬ ಸರಸ್ವತೀ ವಿದ್ಯಾಲಯದ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ಕ್ಷೇತ್ರಿಯ ಮಟ್ಟದ ಯೋಗಾ ಸ್ಪರ್ದೆಗೆ ಆಯ್ಕೆಯಾಗಿರುತ್ತಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ತೃಷ್ಮಾ ಕೆ, ಮೋಹಿತಾ ಜೆ ರೈ ಇವರುಗಳು ಕಿಶೋರ ವಿಭಾಗದ ಬಾಲಕಿಯರ ಯೋಗಾಸನ ಸ್ಪರ್ದೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಆಂದ್ರ ಪ್ರದೇಶದ ಗುಂಟೂರು ಜಿಲ್ಲೆಯ ಸರಸ್ವತೀ ಶಿಶು ಮಂದಿರದಲ್ಲಿ ನಡೆಯುವ ಕ್ಷೇತ್ರಿಯ ಮಟ್ಟದ ಯೋಗಾ ಸ್ಪರ್ದೆಗೆ ಆಯ್ಕೆಯಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಲಕ್ಷ್ಮೀಶ ಗೌಡ ತರಬೇತಿ ನೀಡಿರುತ್ತಾರೆ.

Scroll to Top