(ನ್ಯೂಸ್ ಕಡಬ) newskadaba.com ಮ0ಗಳೂರು, ಮೇ.26. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಪೆಡರೇಶನ್ ನಿ. ಮುಳಿಹಿತ್ಲು, ಬೋಳಾರ, ಮಂಗಳೂರು ಇವರ ಸಹಯೋಗದೊಂದಿಗೆ ನೂತನವಾಗಿ ಪ್ರಾರಂಭಿಸಲಾದ ಬ್ಯಾಂಕಿಂಗ್ ವಿಭಾಗದ ದ್ವಿತೀಯ ಮಂಗಳೂರು ಶಾಖೆ ಇದರ ಉದ್ಘಾಟನಾ ಸಮಾರಂಭವು ಜೂನ್ 1 ರಂದು ಬೆಳಿಗ್ಗೆ 10 ಗಂಟೆಗೆ ಮೀನುಗಾರಿಕಾ ಬಂದರಿನಲ್ಲಿ ನಡೆಯಲಿದೆ.
ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ನಾಡೋಜ, ಡಾ: ಜಿ.ಶಂಕರ್, ಶಾಸಕ ಜೆ.ಆರ್. ಲೋಬೋ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಡಾ: ರಾಜೇಂದ್ರ ಕುಮಾರ್ , ಫೆಡರೇಶನ್ ಆಧ್ಯಕ್ಷ ಯಶಪಲ್ ಸುವರ್ಣ ಮತ್ತಿತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮೀನು ಮಾರಾಟ ಫೆಡರೇಶನ್: ನೂತನ ಬ್ಯಾಂಕಿಂಗ್ ಶಾಖೆ ಉದ್ಘಾಟನೆ
