ದ್ವಿಚಕ್ರ ವಾಹನಗಳು ಢಿಕ್ಕಿ: ಇಬ್ಬರು ಯುಉವಕರು ಬಲಿ

ವಿಟ್ಲ, ಜ.14: ದ್ವಿಚಕ್ರ ವಾಹಗಳು ಮುಖಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಮಠದ ತಿರುವಿನಲ್ಲಿ ನಡೆದಿದೆ.

 

ಮೃತ ಯುವಕರನ್ನು ಬೈಕ್ ಸವಾರ ಮಾಣಿ ಬರಣಿಕೆರೆ ನಿವಾಸಿ ಪರೀಕ್ಷಿತ್, ಕಲ್ಲಡ್ಕ ಗೋಳ್ತಮಜಲು ನಿವಾಸಿ ಅಜ್ಮಲ್ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಮತ್ತೋರ್ವ ಮಾಣಿ ನಿವಾಸಿ ಪದ್ಮನಾಭ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುವಿಗೆ ಆಂಬ್ಯುಲೆನ್ಸ್ ವಾಹನದ ಇಎಂಟಿ ಪ್ರದೀಪ್, ಪೈಲಟ್ ಕಳಸನಗೌಡ ಅವರು ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕ್ಟಿವಾ ಸವಾರ ಕೊಡಾಜೆ ಕಡೆಗೆ ಬರುತ್ತಿದ್ದು, ಬೈಕ್‌ನಲ್ಲಿ ಇಬ್ಬರು ಮಾಣಿ ಕಡೆಗೆ ಕಡೆಗೆ ಹೋಗುತ್ತಿದ್ದರೆನ್ನಲಾಗಿದೆ. ರಸ್ತೆಯಲ್ಲಿ ನಾಯಿ ಅಡ್ಡ ಬಂದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

Also Read  ನಕಲಿ ದಾಖಲೆ ಸೃಷ್ಟಿಸಿ 1.25 ಕೋಟಿ ವಂಚನೆ ➤ ಮಗಳ ವಿರುದ್ದ ದೂರು ದಾಖಲಿಸಿದ ತಾಯಿ  

ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 

error: Content is protected !!
Scroll to Top