ಸಿಎಎ, ಎನ್ಆರ್‌ಸಿ, ಎನ್‌ಪಿಆರ್ ವಿರುದ್ಧ ಅಡ್ಯಾರ್ ಕಣ್ಣೂರು ಬೃಹತ್ ಪ್ರತಿಭಟನೆಗೆ ಕ್ಷಣಗಣನೆ

  • 1ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ

  • ವಾಹನ ಸಂಚಾರದಲ್ಲಿ ಮಾರ್ಪಾಡು

  • ಪೊಲೀಸ್ ಬಿಗಿ ಬಂದೋಬಸ್ತ್

ಮಂಗಳೂರು, ಜ.15: ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ಮುಸ್ಲಿಮ್ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಇಂದು ಅಡ್ಯಾರ್ ಕಣ್ಣೂರಿನ ಶಹಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ  ನಡೆಯಲಿದೆ.

ಅಪರಾಹ್ನ 2:30ಕ್ಕೆ ಪ್ರತಿಭಟನಾ ಸಮಾವೇಶ ನಡೆಯಲಿದ್ದು, ದ.ಕ. ಹಾಗೂ ಉಡುಪಿ ಜಿಲ್ಲೆಯ ಸುಮಾರು 1ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಸಮಾವೇಶದಲ್ಲಿ ನಿವೃತ ಐಎಎಸ್ ಅಧಿಕಾರಿಗಳಾದ ಹರ್ಷ ಮಂದರ್, ಕಣ್ಣನ್ ಗೋಪಿನಾಥನ್, ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ, ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್, ನ್ಯಾಯವಾದಿ ಸುಧೀರ್ ಮುರೋಳಿ ಮುಖ್ಯ ಭಾಷಣ ಮಾಡಲಿದ್ದಾರೆ.

ಪೊಲೀಸ್ ಬಿಗಿ ಬಂದೋಬಸ್ತ್: ಬೃಹತ್‌ ಸಮಾವೇಶ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ಬಂದೋಬಸ್ತ್ ‌ಗಾಗಿ 3 ಸಾವಿರಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. 8 ಮಂದಿ ಎಸ್‌ಪಿ, 12 ಮಂದಿ ಎಎಸ್‌ಪಿ, 40 ಮಂದಿ ಡಿಎಸ್‌ಪಿ, 9 ಇನ್‌ಸ್ಪೆಕ್ಟರ್‌, 200 ಮಂದಿ ಸಬ್‌ ಇನ್‌ಸ್ಪೆಕ್ಟರ್‌ಗಳು, 300 ಎಎಸ್‌ಐಗಳು ಭದ್ರತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ಕೇಂದ್ರೀಯ ಅರೆಸೇನಾ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ರ‌್ಯಾಪಿಡ್ ಇಂಟರ್‌ವೆನ್ಶನ್‌ ವಾಹನ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿ
ಕೊಳ್ಳಲಾಗಿದೆ. ಸಮಾವೇಶ ನಡೆಯುವ ಮೈದಾನ ಮತ್ತು ಸುತ್ತಲಿನ ಪ್ರದೇಶದಲ್ಲಿಯೇ 2 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

Also Read  ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ➤ ಕಡಬದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹರ್ಷಾಚರಣೆ

ನಗರದ ಆಯಕಟ್ಟಿನ ಪ್ರದೇಶಗಳಲ್ಲಿಯೂ ಭದ್ರತೆ ಏರ್ಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಾಹನ ಸಂಚಾರ ಮಾರ್ಪಾಟು

ಸಮಾವೇಶ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯ ವರೆಗೆ ವಾಹನಗಳ ಮಾರ್ಗವನ್ನು ಈ ಕೆಳಗಿನಂತೆ ಬದಲಾಯಿಸಲಾಗಿದೆ.
– ಉಡುಪಿಯಿಂದ ಬೆಂಗಳೂರು ಕಡೆಗೆ ಪಡುಬಿದ್ರಿಯಲ್ಲಿ ತಿರುವು ಪಡೆದು ಕಾರ್ಕಳ-ಧರ್ಮಸ್ಥಳ- ಶಿರಾಡಿ ಘಾಟಿ ರಸ್ತೆಯಾಗಿ ಸಂಚರಿಸಬೇಕು.

– ಬೆಂಗಳೂರಿನಿಂದ ಮಂಗಳೂರಿಗೆ ಮೆಲ್ಕಾರ್‌-ಬಿ.ಸಿ. ರೋಡ್‌ ವಯಾ ಕೊಣಾಜೆ- ತೊಕ್ಕೊಟ್ಟು-ಮಂಗಳೂರು ರಸ್ತೆಯಾಗಿ ಸಂಚರಿಸಬೇಕು.

– ಮಂಗಳೂರಿನಿಂದ ಬೆಂಗಳೂರು ಕಡೆಗೆ ನಂತೂರು-ಪಂಪ್‌ವೆಲ್‌- ತೊಕ್ಕೊಟ್ಟು-ಕೊಣಾಜೆ- ಬಿ.ಸಿ.ರೋಡ್‌ ಮಾರ್ಗವಾಗಿ ಸಂಚರಿಸಬೇಕು.

– ಬಿ.ಸಿ. ರೋಡ್‌ನಿಂದ ಮಂಗಳೂರು ಕಡೆಗೆ ಪೊಳಲಿ ಕೈಕಂಬ ಮಾರ್ಗದಲ್ಲಿ ಸಂಚರಿಸಬೇಕು.

 ವಾಹನ ಪಾರ್ಕಿಂಗ್‌ ಸ್ಥಳ
– ಮಂಗಳೂರಿನಿಂದ ದ್ವಿಚಕ್ರ ವಾಹನಗಳಲ್ಲಿ ಆಗಮಿಸು ವವರಿಗೆ ಜಾಗ್ವಾರ್‌ ಶೋರೂಂ ಎದುರಿನ ಮೈದಾನ.

– ಮಂಗಳೂರಿನಿಂದ ಬರುವ ಎಲ್ಲ ಕಾರು ಮತ್ತು ಇತರ ಚತಷcಕ್ರ ವಾಹನಗಳಿಗೆ ಸೀಝರ್‌ ಬೀಡಿ ಮೈದಾನ.

Also Read  ಸಿಎಎ, ಎನ್ಆರ್‌ಸಿ, ಎನ್‌ಪಿಆರ್ ವಿರುದ್ದ ರಾಷ್ಟ್ರವ್ಯಾಪಿ 'ಯಾತ್ರೆ': ಯಶವಂತ್ ಸಿನ್ಹಾ

– ಮಂಗಳೂರು ಮತ್ತು ಬಿ.ಸಿ. ರೋಡ್‌ ಕಡೆಯಿಂದ ಬರುವ ಬಸ್‌ಗಳಿಗೆ ಮೋತಿಶ್ಯಾಂ ಮೈದಾನ.

– ಬಿ.ಸಿ. ರೋಡ್‌ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಕಂಬ್ಳಿ ಪಾರ್ಕಿಂಗ್‌ ಮೈದಾನ.

– ಬಿ.ಸಿ. ರೋಡ್‌ ಕಡೆಯಿಂದ ಬರುವ ಎಲ್ಲ ಕಾರು ಮತ್ತು ಇತರ ಚತುಷcಕ್ರ ವಾಹನಗಳಿಗೆ ಅಡ್ಯಾರ್‌ ಕಟ್ಟೆ ಜುಮ್ಮಾ ಮಸೀದಿ ಮೈದಾನ.

– ಎಲ್ಲ ಪೊಲೀಸ್‌-ತುರ್ತು ಸೇವೆಗಳ ವಾಹನಗಳಿಗೆ ವೆಲ್‌ರಿಂಗ್‌ ಪಾರ್ಕಿಂಗ್‌ ಮತ್ತು ಶಂಕರ್‌ ವಿಠಲ್‌ ಪಾರ್ಕಿಂಗ್‌ ಸ್ಥಳ.

– ಬಿ.ಸಿ. ರೋಡ್‌ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಹಮೀದ್‌ ಮೈದಾನ.

– ಬಿ.ಸಿ.ರೋಡ್‌ ಕಡೆಯಿಂದ ಬರುವ ಕಾರು, ಇತರ ಚತುಷcಕ್ರ ವಾಹನಗಳಿಗೆ ಡಾ. ಶ್ಯಾಮ್ಸ್‌ ಮೈದಾನ.

– ಬಿ.ಸಿ. ರೋಡ್‌, ಫ‌ರಂಗಿಪೇಟೆ ಕಡೆಯಿಂದ ಬರುವ ಬಸ್‌ಗಳಿಗೆ ಹೆರಿಟೇಜ್‌ ಮೈದಾನ.

– ಅಡ್ಯಾರ್‌ ಗಾರ್ಡನ್‌ ತುರ್ತು ಪಾರ್ಕಿಂಗ್‌ಗೆ ಮೀಸಲು.

error: Content is protected !!
Scroll to Top