ದೇರಳಕಟ್ಟೆ: ಪ್ರತಿಭಟನೆಗೆ ಬಳಸಿದ ಕುರ್ಚಿ ತುಂಬಿದ ಲಾರಿಗೆ ಬೆಂಕಿ ಹಚ್ಚಿದ ಕೀಡಿಗೇಡಿಗಳು?

  • ಸೂಕ್ತ ತನಿಖೆಗೆ ಸ್ಥಳೀಯರ ಆಗ್ರಹ

ಮಂಗಳೂರು‌, ಜ.13: ದೇರಳಕಟ್ಟೆಯಲ್ಲಿ ರವಿವಾರ ನಡೆದ ಸಿಎಎ, ಎನ್ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಬಳಸಲಾಗಿದ್ದ  2,500 ಕುರ್ಚಿಗಳನ್ನು ತುಂಬಿದ್ದ ಈಚರ್‌ ವಾಹನವು ರಾತ್ರಿ ಸುಮಾರು 2:30 ಗಂಟೆಗೆ ಬೆಂಕಿಗಾಹುತಿಯಾಗಿದ್ದು, ಯಾರೂ ಕೀಡಿಗೇಡಿಗಳು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಪೌರತ್ವ ಸಂರಕ್ಷಣಾ ಸಮಿತಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ರ್‍ಯಾಲಿ ಮುಗಿದ ಬಳಿಕ ಕುರ್ಚಿಗಳನ್ನು ಈಚರ್‌ ವಾಹನಕ್ಕೆ ಲೋಡ್‌ ಮಾಡಲಾಗಿದ್ದು, ಕುರ್ಚಿಗಳನ್ನು ತುಂಬಿದ್ದ ವಾಹನಕ್ಕೆ ಅಪರಿಚಿತರು ಬೆಂಕಿ ಹಚ್ಚಿದ್ದಾರೋ ಅಥವಾ ಆಕಸ್ಮಕವಾಗಿ ಬೆಂಕಿ ಹತ್ತಿಕೊಂಡಿದೆಯೋ ಎಂಬ ಅನುಮಾನಗಳಿವೆ. ಘಟನಾ ಸ್ಥಳಕ್ಕೆ ನೂರಾರು ಜನ ಜಮಾಸಿಯಿದ್ದು ಘಟನೆಯ ಬಗ್ಗೆ ಸರಿಯಾದ ತನಿಖೆ ಮಾಡದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

Also Read  ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ ➤ ಆರೋಪಿ ವಶಕ್ಕೆ

error: Content is protected !!
Scroll to Top