ಪೋಷಕರ ಹಾಗೂ ಅಧ್ಯಾಪಕರ ನಿರಂತರ ಸಂಪರ್ಕದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿ ➤ ಜೇಸಿ ಅಬ್ದುಲ್ಲಾ ಮಾಸ್ಟರ್

ಬೆಳ್ಳಾರೆ. ಜ.11. ಝಕರಿಯಾ ಜುಮಾಮಸೀದಿ ಬೆಳ್ಳಾರೆ ಇದರ ಅಧೀನದಲ್ಲಿ ನಡೆಯುತ್ತಿರುವ ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ವಾರ್ಷಿಕೋತ್ಸವವು ಇಂದು ಶಾಲಾ ಸಂಚಾಲಕರಾದ ಬಶೀರ್ ಬಿ.ಎ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಉಪಾಧ್ಯಕ್ಷ ಯು.ಹೆಚ್ ಅಬೂಬಕ್ಕರ್ ಕಾರ್ಯಕ್ರಮವನ್ನ ಉದ್ಘಾಟಿಸಿದರು. ಪ್ರಸಕ್ತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗದೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ.ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳಬೇಕಾದಲ್ಲಿ ಹೆತ್ತವರು, ಪೋಷಕರು ಅಧ್ಯಾಪಕರೊಡನೆ ನಿರಂತರ ಸಂಪರ್ಕ ಹಾಗೂ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವುದು ಅತೀ ಅಗತ್ಯ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಎನ್ ಎಂ ಪಿ ಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೇಸಿ ಅಬ್ದುಲ್ಲಾ ಮಾಸ್ಟರ್ ಅರಂತೋಡು ಕರೆ ನೀಡಿದರು.

Also Read  ಮಂಗಳೂರು :ಹಾಲಿನ ವಾಹನದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ

ಶಾಲಾ ಮುಖ್ಯ ಶಿಕ್ಷಕಿ ಸುನೈನಾ ವಾರ್ಷಿಕ ವರದಿ ವಾಚಿಸಿದರು.ಬೆಳ್ಳಾರೆ ಝಕರಿಯಾ ಜುಮಾಮಸೀದಿ ಆಡಳಿತ ಸಮಿತಿ ಕಾರ್ಯದರ್ಶಿ ಬಶೀರ್ ಕಲ್ಲಪಣೆ, ಕೋಶಾಧಿಕಾರಿ ಹಾಜಿ ಕೆ ಮಮ್ಮಾಲಿ, ಬೆಳ್ಳಾರೆ ಗ್ರಾ.ಪಂ ಸದಸ್ಯ ಆರೀಫ್ ಬೆಳ್ಳಾರೆ, ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯ ಬಶೀರ್ ಯು ಪಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಖಲಂದರ್ ಶಾಫಿ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು. ಜಮಾಅತ್ ಆಡಳಿತ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಸ್ವಾಗತಿಸಿ, ಶಿಕ್ಷಕಿ ನಿವ್ಯಾ ವಂದಿಸಿದರು. ಶಿಕ್ಷಕಿ ಅಝ್ಮೀನ ಕಾರ್ಯಕ್ರಮ ನಿರೂಪಿಸಿದರು.

Also Read  ಕೇರಳದ ನರ್ಸ್‌ ಗಳಿಂದ ಗಲ್ಫ್ ಬ್ಯಾಂಕ್‌ಗೆ 700 ಕೋಟಿ ರೂ. ವಂಚನೆ - ಪ್ರಕರಣ ದಾಖಲು

error: Content is protected !!
Scroll to Top