ಹಳೆನೇರಂಕಿ ನಫೀಸತ್ತುಲ್ ಮಿಸ್ರಿಯಾ ದಅವಾ ಕಾಲೇಜು ದ್ವಿತೀಯ ವಾರ್ಷಿಕ ➤ ಅಬೂಬಕ್ಕರ್ ಸಿದ್ದೀಕ್ ಅಲ್ ಅಝ್ಹರಿ ನಾಳೆ ಹಳೆನೇರಂಕಿಗೆ

(ನ್ಯೂಸ್ ಕಡಬ) Newskadaba.com ಆತೂರು. ಜ.11. ಮುಹಿಯದ್ದೀನ್ ಜುಮಾ ಮಸೀದಿ ಹಳೆನೇರಂಕಿ ಇದರ ಆಶ್ರಯದಲ್ಲಿ ನಫೀಸತುಲ್ ಮಿಸ್ರಿಯ ದಅವಾ ಕಾಲೇಜು ಇದರ ದ್ವಿತೀಯ ವಾರ್ಷಿಕ ಕಾರ್ಯಕ್ರಮವು ನಾಳೆ ಮಗ್ರಿಬ್ ನಮಾಜಿನ ನಂತರ ನಡೆಯಲಿದೆ.

ಆಧ್ಯಾತ್ಮಿಕ ಮಜ್ಲಿಸುನ್ನೂರ್ ಸಂಗಮದ ನೇತೃತ್ವವನ್ನು ಬಹು| ಮುಹಮ್ಮದ್ ಜುನೈದ್ ಜಿಫ್ರೀ ತಂಙಳ್ ಫೈಝಿ ಆತೂರು ವಹಿಸಲಿದ್ದು, ಸುಲೈಮಾನ್ ಬೈಲಂಗಡಿ ಅಧ್ಯಕ್ಷತೆ ವಹಿಸಲಿದ್ದಾರೆ.ವಾರ್ಷಿಕ ಸಮ್ಮೇಳನದ ದುವಾವನ್ನು ಬಹು| ಸಯ್ಯಿದ್ ಅನಸ್ ಅಲ್ ಹಾದಿ ತಂಙಳ್ ಅಲ್ ಅಝ್ಹರಿ ಗಂಡಿಬಾಗಿಲು, ಅಧ್ಯಕ್ಷತೆಯನ್ನು ಬಹು| ಶರಫುದ್ದೀನ್ ತಂಙಳ್ ಸಾಲ್ಮರ ವಹಿಸಲಿದ್ದು, ಬಹು| ಅಬ್ದುಲ್ ರಹಿಮಾನ್ ದಾರಿಮಿ ತಬೂಕ್ ಉದ್ಘಾಟಿಸಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಅಬೂಬಕ್ಕರ್ ಸಿದ್ದೀಕ್ ಅಲ್ ಅಝ್ಹರಿ ಪಯ್ಯನ್ನೂರು, ಕೇರಳ ಇವರು ನಡೆಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಫುಟ್ ಪಾತ್ ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ

error: Content is protected !!
Scroll to Top