ಆಲಂಕಾರು : ಶಾಲಾ ಶತಮಾನೋತ್ಸವಕ್ಕೆ ಹಾಸನದ ಉಧ್ಯಮಿಯಿಂದ ಲಾಕರ್ ಗೋದ್ರೇಜ್ ಕೊಡುಗೆ

(ನ್ಯೂಸ್ ಕಡಬ) newskadaba.com, ಕಡಬ, ಜ.11  ಶತಮಾನೋತ್ಸವ ಸಂಭ್ರಮದಲ್ಲಿರುವ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.1 ಮತ್ತು ಫೆ2 ರಂದು ಶಾಲಾ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ.

ಹಾಸನದ ಉಧ್ಯಮಿ ಜೈ ಹನುಮಾನ್ ಟ್ರೇಡರ್ಸ್‍ನ ಮಾಲಿಕ ಸೋಮಶೇಖರ್ ರವರು ಶಾಲೆಗೆ ಲಾಕರ್ ಗೋದ್ರೇಜನ್ನು ಕೊಡುಗೆಯಾಗಿ ಶಾಲಾ ಮುಖ್ಯಗುರು ಕೆ.ಪಿ. ನಿಂಗರಾಜು ರವರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Scroll to Top